ಚಳ್ಳಕೆರೆ ನ್ಯೂಸ್ :
ಶ್ರೀ ವೀರಭದ್ರಸ್ವಾಮಿ ದೇವಾಲಯದ ಮುಂಭಾಗ
ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಭಕ್ತರು
ಆರಾಧ್ಯ ದೈವ ಶ್ರೀ ವೀರಭದ್ರ ಸ್ವಾಮಿ ಜಾತ್ರೆ ಅದ್ದೂರಿಯಾಗಿ
ಜರುಗುತ್ತಿದ್ದು
ಬುಧಾವಾರ ಮುಂಜಾನೆ ನಾಲ್ಕು ಗಂಟೆ ಸಮಯಕ್ಕೆ ಕೆಂಡ ತುಳಿದ ಕುರುವಂತಪ್ಪ ನಾಟ್ಯ
ಬ್ರಹ್ಮರಥೋತ್ಸವ ಅದ್ದೂರಿಯಾಗಿ ಜರುಗಲಿದ್ದು ಇಂದು ಬೆಳಗಿನ
ಜಾವ ನಾಲ್ಕು ಗಂಟೆಗೆ ಸರಿಯಾಗಿ ದೇವಸ್ಥಾನದ ಮುಂಭಾಗದಲ್ಲಿ
ಅಗ್ನಿಕುಂಡ ನಿರ್ಮಿಸಿ ಭಕ್ತರು ಕೆಂಡ ತುಳಿಯುವದರ ಮೂಲಕ ಶ್ರೀ
ಸ್ವಾಮಿಗೆ ಸಮರ್ಪಣೆ ಮಾಡಿದ್ದಾರೆ.
ಅಗ್ನಿಕುಂಡಕ್ಕೆ ಪೂಜೆ ಸಲ್ಲಿಸಿದ
ಪೂಜಾರಿ ಅವರು ಅಗ್ನಿ ತುಳಿದ ನಂತರ ಭಕ್ತರು ಅವರ ಹಿಂದೆ ಜೈ
ಕರ ಹಾಕುತ್ತಾ ಕೆಂಡವನ್ನು ತುಳಿದು ಭಕ್ತಿಯನ್ನು ಸಮರ್ಪಿಸಿದರು.