ಚಳ್ಳಕೆರೆ ನ್ಯೂಸ್ :
ಜಗನ್ನಾಥ್ ರೆಡ್ಡಿ ಆಸ್ತಿ ವಿವಿರ : ನಿಖರ ಮಾಹಿತಿ ಸಿಕ್ಕಿಲ್ಲ
ಚಿತ್ರದುರ್ಗದ ಅಸ್ಥಿ ಪಂಜರಗಳ ಪ್ರಕರಣದ ಪೊಲೀಸ್
ತನಿಖೆಯಲ್ಲಿ, ಜಗನ್ನಾಥ್ ರೆಡ್ಡಿ ದೂರದ ಸಂಬಂಧಿಗಳನ್ನು ವಿಚಾರಣೆ
ಮಾಡಿದ್ದು, ಗುಬ್ಬಿಯಲ್ಲಿ ಆಸ್ತಿ ಇತ್ತು ಎಂದು ಹೇಳುತ್ತಾರೆ.
ಆದರೆ
ನಿಖರ ಮಾಹಿತಿ ಸಿಕ್ಕಿಲ್ಲವೆಂದು ಚಿತ್ರದುರ್ಗದ ಎಸ್ಪಿ ಧರ್ಮೇಂದ್ರ
ಕುಮಾರ್ ಮೀನಾ ಹೇಳಿದರು.
ಅವರು ಚಿತ್ರದುರ್ಗದಲ್ಲಿ
ಮಾಧ್ಯಮಗಳೊಂದಿಗೆ ಮಾತಾಡಿದರು. ಆಸ್ತಿ ಬಗ್ಗೆ ಬೇರೆ ಬೇರೆ
ಇಲಾಖೆಗಳಿಗೆ ಪತ್ರ ಬರೆದು ತಿಳಿದುಕೊಳ್ಳುತ್ತೇವೆ.
ಅವರ
ಖಾತೆಯಲ್ಲಿ ಎಷ್ಟು ಹಣವಿತ್ತೆಂದು ತಿಳಿದಿಲ್ಲ ಎಂದರು.