ಈ ಮಧ್ಯ ಕರ್ನಾಟಕದ ಬಯಲು ಪ್ರದೇಶದಲ್ಲಿ 1008 ಮನೆಗಳ ನಿರ್ಮಾಣಕ್ಕೆ ಸ್ಥಳೀಯ ಕ್ಷೆತ್ರದ ಶಾಸಕ ಟಿ.ರಘುಮೂರ್ತಿ ಪರಿಶ್ರಮ ತುಂಬಾ ಇದೆ ಎಂದು ವಸತಿ ಸಚಿವ ಸೋಮಣ್ಣ ಹೇಳಿದ್ದಾರೆ.

.
ಚಳ್ಳಕೆರೆ ನಗರದ ಪಾವಗಡ ರಸ್ತೆಯ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾಗುವ ಜಿ+2 ವಸತಿ ನಿವೇಶನಗಳ 1008 ಮನೆಗಳ ನಿರ್ಮಾಣದ ಶಂಕುಸ್ಥಾಪನೆ ಕಾಮಗಾರಿ ಭೂಮಿ ಪೂಜೆ ನೆರೆವೆರಿಸಿ ಮಾತನಾಡಿರು,

ಬಡವರಿಗೆ ಸೂರು ಕಲ್ಪಿಸುವ ಮಹತ್ವಕಾಂಕ್ಷೆ ಯೋಜನೆಯಲ್ಲಿ ಸರಕಾರ ಸದಾ ಮುಂದಿದೆ, ಗ್ರಾಮಿಣ ಭಾಗದ ಜನರಿಗೆ 1.20ಲಕ್ಷ, ನಗರ ಪ್ರದೇಶದ ಜನರಿಗೆ 1.50 ಲಕ್ಷ, ಇದ್ದ ಅನುದಾನ ರಾಜ್ಯ ಸರಕಾರ ಚರ್ಚೆ ನಡೆಸಿ ಪ್ರಸ್ತುತ ಈಗ 25 ಸಾವಿರಕ್ಕೆ ಹೆಚ್ಚಳ ಮಾಡಿದೆ,

ಈ ಬಡವಣೆಗೆ ಮಾಜಿಮಂತ್ರಿ ತಿಪ್ಪೆಸ್ವಾಮಿ ಹೆಸರನ್ನು ನಾಮಕರಣಕ್ಕೆ ನಾನೇ ಶಿಪಾರಸ್ಸು ಮಾಡಿ ಆದೇಶ ನೀಡುತ್ತೆನೆ ಅದನ್ನು ಅನುಮೊದಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ಸೂಚಿಸಿದರು, ರಾಜ್ಯದಲ್ಲಿ ಹೆಣ್ಣು ಮಕ್ಕಳ ಹೆಸರಿಗೆ ಮಾತ್ರ ಮನೆ ನಿರ್ಮಾಣಕ್ಕೆ ನೀಡಲಾಗುವುದು ಪುರುಷರು ಸರಿಯಾದ ಸೂರು ನಿರ್ಮಿಸದೆ ಕುಟುಂಬ ಅನಾಥವಾಗುತ್ತದೆ ಆದ್ದರಿಂದ ಮಹಿಳೆ ಹೆಸರಿಗೆ ಮಾತ್ರ ನೀಡಿ, ನಂತರ ಎಪಿಎಂಸಿ ಹಮಾಲರ ಮನವಿಯಂತೆ ಇನ್ನೂ ಹೆಚ್ಚಿನಿದಾಗಿ ಮನೆಗಳ ನಿರ್ಮಾಣಕ್ಕೆ ಸೂಚಿಸಲಾಗುವುದು ನಿಮ್ಮ ಕ್ಷೇತ್ರದ ಶಾಸಕರೊಟ್ಟಿಗೆ ಮನವಿಯ ಪಟ್ಟಿ ನೀಡಿ ಎಂದರು.


ಶಾಸಕ ಟಿ.ರಘುಮೂರ್ತಿ ಮಾತನಾಡಿ, ನಗರದಲ್ಲಿ ಜಿ+2 ಮಾಡಿರುವುದು ನಗರದ ಬಡ ಜನರಿಗೆ ವರದಾನವಾಗಿದೆ ಈಗಾಗಲೇ ನಗರದಲ್ಲಿ ಒಂದು ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸವಿರುವುದು ಕಾಣುತ್ತೆವೆ ಇಂತಹವರಿಗೆ ನೆರವು ನೀಡುವ ಸದುದ್ದೆಶದಿಂದ ಇಂದು ನಗರದ 126 ಎಕರೆ ಜಾಗದಲ್ಲಿ ಹೌಸಿಂಗ್ ಬೋರ್ಡ್ ಯೋಜನೆ ಪ್ರಾರಂಬಿಸಿ ವಸತಿ ನೀಡಲಾಗುವುದು,


ಆದರೆ 2013 ರಲ್ಲಿ ಮೊದಲ ಬಾರಿಗೆ ಶಾಸಕರಾದ ವೇಳೆ ಮುನ್ನೂರು ಎಂಬತ್ತು ನಿವೇಶಗಳು ಜಾಸ್ತಿಯಾಗಿತು ನಂತರ 1750 ನಿವೇಶನಗಳಲ್ಲಿ 5250 ಮನೆಗಳಲ್ಲಿ ನುಮೋದನೆಗೆ ಕಳಿಸಿದ್ದೆವೆ ಆದರೆ ಮೊದಲ ಹಂತದಲ್ಲಿ 1008ಮನೆಗಳ ಮುಂಜೂರು ಹಾಗಿದೆ, ಈದೇ ವರ್ಷದಲ್ಲಿ ಬಡವರಿಗೆ ಸೂರು ಸಿಗುವ ಪ್ರಯತ್ನ ಮಾಡಲಾಗುತ್ತದೆ ಎಂದರು.

About The Author

Namma Challakere Local News
error: Content is protected !!