ಚಳ್ಳಕೆರೆ : ಹಲವಾರು ವರ್ಷಗಳಿಂದ ಸ್ವತಂ ಸೂರು ಇಲ್ಲದೆ ಸರಕಾರಿ ಜಮೀನಿನಲ್ಲಿ ವಾಸ ಮಾಡುವ ಸುಮಾರು ಕುಟುಂಬಗಳಿಗೆ ಇಂದು ಆಶ್ರಯ ಸಿಕ್ಕಂತಾಗಿದೆ,
ಹೌದು ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಗುರುವಾರ ಉಪವಿಭಾಗಧಿಕಾರಿ ಎಂ. ಕಾರ್ತಿಕ್ ಅಧ್ಯಕ್ಷತೆಯಲ್ಲಿ ಚಳ್ಳಕೆರೆ ತಾಲೂಕಿನ ಐದು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಪರೀಶಿಲನೆ ನಡೆಸಿದ್ದಾರೆ.
ಈಗಾಗಲೇ ಇರುವ ಗ್ರಾಮಗಳಲ್ಲಿ ದಾಖಲಾತಿಗಳು ಇಲ್ಲದೆ ಸರಕಾರಿ ಜಮೀನುಗಳಲ್ಲಿ ವಾಸದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ತಾಲೂಕಿನ ತಳಕು ಹೋಬಳಿಯ ಮೂಲ ಗ್ರಾಮವಾದ ಓಬಳಾಪುರದ ಹೊಸ ಕಂದಾಯ ಗ್ರಾಮ ದಾಸರಹಳ್ಳಿ, ಹಾಗೂ ಕಸಭಾ ಹೋಬಳಿಯ ದೊಡ್ಡೆರಿ ಗ್ರಾಮದ ಹೊಸ ಕಂದಾಯ ಗ್ರಾಮ ಕೆಂಚವೀರನಹಳ್ಳಿ, ಪರಶುರಾಂಪುರ ಹೋಬಳಿಯ ಓಬನಹಳ್ಳಿ ಗ್ರಾಮದ ಹೊಸ ಕಂದಾಯ ಗ್ರಾಮ ಭೋವಿಕಾಲೋನಿ, ನಾಯಕನಹಟ್ಟಿ ಗೋಬಳಿಯ ನರ‍್ಲಗುಂಟೆ ಗ್ರಾಮದ ಭತ್ತಯ್ಯನಹಟ್ಟಿ, ಮಲ್ಲೂರಹಳ್ಳಿ ಗ್ರಾಮದ ಶಿವನಗರ ಗ್ರಾಮಗಳನ್ನು ಹೊಸ ಕಂದಾಯ ಗ್ರಾಮಗಳನ್ನಾಗಿ ಮಾಡಲು ಉಪವಿಭಾಗಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ವರದಿ ಸಲ್ಲಿಸಲಾಗಿದೆ.
ಇನ್ನೂ ಹೊಸ ಕಂದಾಯ ಗ್ರಾಮವಾದ ನಂತರ ಮೂಲ ಭೂತ ಸೌಲಭ್ಯದ ಜೊತೆಗೆ ಸ್ವತಃ ವಾಸದ ಮನೆಯ ಹಕ್ಕು ಪತ್ರ ಸಿಗುತ್ತದೆ ಈಗೇ ಸರಕಾರದ ಯೋಜನೆಗಳಿಗೆ ಇಲ್ಲಿನ ಜನರು ಅರ್ಹರಾಗುತ್ತಾರೆ ಎನ್ನಲಾಗಿದೆ.
ಇದೇ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಕಂದಾಯ ಅಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಿಗರು ಹಾಗೂ ಫಲಾನುಭವಿಗಳು ಸಾರ್ವಜನಿಕರು ಹಾಜರಿದ್ದರು.

Namma Challakere Local News
error: Content is protected !!