ಚಳ್ಳಕೆರೆ ನ್ಯೂಸ್ :
ಮಹರ್ಷಿ ಭಗೀರಥ ಜಯಂತಿ ಅಂಗವಾಗಿ ಚಳ್ಳಕೆರೆ ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಸರಳವಾಗಿ ಜಯಂತಿ ಆಚರಿಸಿದರು.
ಇನ್ನೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ ತಹಶಿಲ್ದಾರ್ ರೇಹಾನ್ ಪಾಷ ರವರು ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಯಂತಿಯನ್ನು ಸಮುದಾಯದ ಮುಖಂಡರೊಟ್ಟಿಗೆ ಸರಳವಾಗಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಆಚರಿಸಿದರು
ಇದೇ ಸಂಧರ್ಭದಲ್ಲಿ ನಿವೃತ್ತ ಪ್ರೋ.ಟಿ.ನಾಗರಾಜ್ ಮಾತನಾಡಿ, ‘ಭಗೀರಥ ಮಹರ್ಷಿಯ
ಆದರ್ಶವನ್ನು ಪಾಲಿಸುತ್ತಾ, ಅವರು ತೋರಿದ ಮಾರ್ಗದಲ್ಲಿ ನಾವೆಲ್ಲರೂ
ಮುನ್ನಡೆಯಬೇಕು’ ಎಂದರು.
ಪೌರಾಯುಕ್ತ ಜೀವನ್ ಕಟ್ಟಿಮನಿ ಮಾತನಾಡಿದರು, ತಹಶೀಲ್ದಾರ್
ರೇಹಾನ್ ಪಾಷ ಮಹರ್ಶಿಭಗೀರಥ ಭಾವಚಿತ್ರಕ್ಕೆ ಪುಷ್ಪನಮನ
ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ
ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಹನುಮಂತಪ್ಪ, ಮಾಜಿ
ಅಧ್ಯಕ್ಷ ಯಲ್ಲಪ್ಪ, ಎಲ್ ಐಸಿ ರಂಗಸ್ವಾಮಿ, ನೀಲಕಂಠಪ್ಪ, ವೆಂಕಟೇಶ್,
ಎಸ್ .ಟಿ.ತಿಪ್ಪೇಸ್ವಾನಿ.ಡಿ.ಎಂ.ಕೆ.ರವಿ. ಗೋವಿಂದರಾಜ್
ಉಲ್ಲಾಸ್.ರಾಮಕೃಷ್ಣಪ್ಪ
ಸಮಾಜದ ಮುಖಂಡರು ಉಪಸ್ಥಿತರಿದ್ದರು.