ಚಳ್ಳಕೆರೆ : ತಡ ರಾತ್ರಿಸುರಿದ ಭಾರೀ ಗಾಳಿ ಮಳೆಗೆ ಚಳ್ಳಕೆರೆ ತಾಲೂಕಿನ ವಿವಿಧ ಕಡೆಗಳಲ್ಲಿ ಸುಮಾರು 30 ಎಕರೆ ಬಾಳೆ ತೋಟಗಳು ಸಂಪೂರ್ಣವಾಗಿ ನೆಲಕಚ್ಚಿದ್ದು ರೈತನಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಹೌದು ಚಳ್ಳಕೆರೆ ತಾಲ್ಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಸುಮಾರು ಐದು ಎಕರೆ ಬಾಳೆ ತೋಟ ಫಸಲಿಗೆ ಬಂದಿತ್ತು ಆದರೆ ಗಾಳಿ ಮಳೆಗೆ ನೆಲಕ್ಕೆ ಬಿದ್ದು ಹಾನಿಯಾಗಿದೆ.
ಇನ್ನೂ ಲಕ್ಷಗಟ್ಟಲೆ ಬಂಡವಾಳ ಹಾಕಿ ಬೆಳೆಸಿದ ಬಾಳೆ ಗಿಡಗಳು ಕೆಲವೇ ದಿನಗಳಲ್ಲಿ ಲಕ್ಷ ಗಟ್ಟಲೆ ಆದಾಯದ ನೀರಿಕ್ಷೆಯಲ್ಲಿದ್ದ, ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಹಾಗೆ ಹೋಗಿದೆ
ಇನ್ನೂ ತೋಟಗಾರಿಕೆ ಸಹಾಯಕ ಅಧಿಕಾರಿ ಆರ್.ವಿರೂಪಾಕ್ಷಪ್ಪ ತೋಟಕ್ಕೆ ಬೇಟಿ ಕೊಟ್ಟು ಬೆಳೆ ಹಾನಿ ಮಾಹಿತಿ ಪಡೆದು ರೈತರಿಗೆ ದೈರ್ಯ ತುಂಬಿದ್ದಾರೆ.
ಇನ್ನೂ ನೊಂದ ರೈತ ಪ್ರಭಾಕರ್ ರವರು ಲಕ್ಷಗಟ್ಟಲೆ ಬಂಡವಾಳ ಹಾಕಿ ಮಕ್ಕಳಂತೆ ಸಾಕಿದ ಬಾಳೆ ತೋಟ ಇಂದು ಪ್ರಕೃತಿ ವಿಕೋಪಕ್ಕೆ ಬಲಿಯಾಗಿದೆ.
ಸುಮಾರು ಐದು ಎಕರೆ ತೋಟದಲ್ಲಿ ಹುಲಸಾಗಿ ಬಂದ ಫಸಲು ಕಣ್ಣಾಮುಂದೆ ನೆಲಕಚ್ಚಿದೆ ಎಂದು ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಅಳಲು ತೋಡಿಕೊಂಡರು.
ಇದೇ ಸಂಧರ್ಭದಲ್ಲಿ ಎಆರ್ ಓ ಪ್ರವೀಣ್ , ಗ್ರಾಮ ಲೆಕ್ಕಾಧಿಕಾರಿ ಚೇತನ್, ಹಾಗೂ ರೈತ ಮುಖಂಡರು ಇತರರು ಇದ್ದರು.