ಚಳ್ಳಕೆರೆ ನ್ಯೂಸ್ : ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಗೆ ನೂರಕ್ಕೆ ನೂರರಷ್ಟು ಫಲಿತಾಂಶ
ಹ್ಯಾಟ್ರಿಕ್ ಸಾಧನೆಯಲ್ಲಿ ಹೊಂಗಿರಣ ಶಾಲೆ
ಚಳ್ಳಕೆರೆ ನ್ಯೂಸ್ : ರಾಜ್ಯಾದ್ಯಂತ
ಎಸ್ ಎಸ್ ಎಲ್ ಸಿ ಫಲಿತಾಂಶ ಇಂದು ಹೊರ ಬಿದ್ದಿದ್ದು
ಚಳ್ಳಕೆರೆ ತಾಲೂಕಿನಲ್ಲಿ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಗೆ ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶ ಸಂದಿದೆ.
ಕಳೆದ ಮೂರು ವರ್ಷಗಳಿಂದ ತನ್ನ ಸಾಧನೆಯ ಮೆಟ್ಟಿಲು ಏರುತ್ತಿರುವ ಹೊಂಗಿರಣ ಶಾಲೆಯ ಮಕ್ಕಳು ಇಂದು ಸಂತಸದ ನಗೆ ಬೀರಿದ್ದಾರೆ.
ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆಗೈಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಇನ್ನೂ ಮಕ್ಕಳ ಸಾಧನೆಗೆ ಕಳೆದ ಮೂರು ವರ್ಷಗಳಿಂದ ಮಾರ್ಗದರ್ಶನ ನೀಡುತ್ತಿರುವ ಭೋಧಕ ವೃಂದದವರಿಗೆ ಶಾಲೆಯ
ಆಡಳಿತ ಮಂಡಳಿಯು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಹೇಳಿಕೆ :
ಕಳೆದ ಮೂರು ವರ್ಷಗಳಿಂದ ಸತತವಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ತರುವಲ್ಲಿ ಹೊಂಗಿರಣ ಶಾಲೆಯ ಮಕ್ಕಳು ಹ್ಯಾಟ್ರಿಕ್ ಸಾಧನೆಯಲಿದ್ದಾರೆ.–
ದಯಾನಂದ ಪ್ರಹ್ಲಾದ್ ಸಂಸ್ಥೆಯ ಕಾರ್ಯದರ್ಶಿ
ಇನ್ನೂ ಸಂಸ್ಥೆಯ ಆಡಳಿತ ಮಂಡಳಿಯ ಗೌರವ ಅಧ್ಯಕ್ಷರಾದ ಡಿ.ನಾಗಪ್ಪ, ಅಧ್ಯಕ್ಷರಾದ ರಾಜೇಶ್ ಗುಪ್ತ, ಕಾರ್ಯದರ್ಶಿಯಾದ ದಯಾನಂದ ಪ್ರಹ್ಲಾದ್ , ಟ್ರಸ್ಟಿಗಳಾದ ಡಿಎನ್.ಮಧುಸೂದನ್, ರವರು ಭೋಧಕ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಶಾಲೆಯ ಒಟ್ಟು ಫಲಿತಾಂಶ ಶ್ರೇಣಿಯಲ್ಲಿ:
ಅತ್ಯುತ್ತಮ ಶ್ರೇಣಿಯಲ್ಲಿ –17
ಪ್ರಥಮ ಶ್ರೇಣಿ–14
ದ್ವಿತೀಯ ಶ್ರೇಣಿ –03
ತೃತೀಯ ಶ್ರೇಣಿ –01