ಚಳ್ಳಕೆರೆ : ಪ್ರೀಯಕರನ ಮಾತು ಕೇಳಿ ಗಂಡನನ್ನೆ ಕೊಲೆ ಮಾಡಿದ ಪತ್ನಿ ಇಂದು ಪೊಲೀಸ್ ರ ಅತಿಥಿಯಾಗಿದ್ದಾಳೆ

ಹೌದು ತನ್ನ ಗಂಡ ಬದುಕಿದ್ದರೆ ನನ್ನ ಪ್ರೀಯಕರನ ಪ್ರೀತಿಗೆ ಅಡ್ಡಿಯಾಗಬಹುದು ಎಂದು ಪ್ರೀಯಕರನ ಜೊತೆ ಪ್ಲಾನ್ ಮಾಡಿ ವ್ಯಾಪಾರದ ಸೋಗಿನಲ್ಲಿ ತನ್ನ ಪತಿಯನ್ನು ಪ್ರೀಯಕರ ಹಾಗು ಪತ್ನಿ ಸೇರಿ ಭಲವಾಗಿ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.

ಚಳ್ಳಕೆರೆ ತಾಲೂಕಿನ ವೀರದಿಮ್ಮನಹಳ್ಳಿ ಗ್ರಾಮದ ಚಂದ್ರಕಲಾ(30) ಹಾಗೂ ಗೋಪಾಲನಾಯ್ಕ(40) ಇವರೊಂದಿಗೆ ವಿವಾಹವಾಗಿದ್ದು ಹಳ್ಳಿ ಹಳ್ಳಿಗಳಿಗೆ ಆಟೋದಲ್ಲಿ ಹೋಗಿ ತರಕಾರಿ ಮಾರಾಟಮಾಡಿ ಜೀವನ ಸಾಗಿಸುತ್ತಿರುತ್ತಾರೆ.

ಏ.20 ರಂದು ಸುತ್ತ ಮುತ್ತಲ ಹಳ್ಳಿಗಳಲ್ಲಿ ವ್ಯಾಪಾರ ಮುಗಿಸಿಕೊಂಡು ಗೋಪನಹಳ್ಳಿ ಗ್ರಾಮದ ಹಾಗೂ ರಾಷ್ಟ್ರೀಯ ಹೆದ್ದಾರಿ ನಡುವೆ ಆಟೋ ಗ್ಯಾಸ್ ಖಾಲಿಯಾಗಿರುತ್ತದೆ

ಈ ಸನ್ನಿವೇಶವನ್ಬು ಉಪಯಿಗಿಸಿಕೊಂಡ ಪತ್ನಿ ಚಂದ್ರಕಲಾ ಪ್ರಿಯಕರ ರಾಜಶೇಖರ್ ನೊಂದಿಗೆ ಪ್ಲಾನ್ ಮಾಡಿಸಿ ಗಂಡನಿಗೆ ಭಲವಾಗಿ ಹೊಡೆದು ಪ್ರಜ್ಞೆ ತಪ್ಪಿದ ಗಂಡನನ್ನು ಪಿಡಿಸು ಬಂದು ಬಿದ್ದಾನೆ ಎಂದು ಬೇರೆಯವರ ಸಹಾಯದಿಂದ ನಗರದ ಸಾರ್ವಜನಿಕ‌ ಆಸ್ಪತ್ರಗೆ ಚಿಕಿತ್ಸೆಗೆಂದು ದಾಖಲು ಮಾಡಿದಾಗ ವೈದ್ಯರು ತಪಾಸಣೆ ನಡೆಸಿ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ ತಕ್ಷಣ ಮೃತದೇಹ ಕೊಟ್ಟರೆ ಸಾಕು ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಲು ಪತ್ನಿ ಚಂದ್ರಕಲಾ ಆತುರದಲ್ಲಿರುತ್ತಾಳೆ.

ಆದರೆ ವೈದ್ಯರು ಪೋಲಿಸ್ ಠಾಣೆಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಪಿಎಂ ವರದಿ ನೀಡುವಂತೆ ವೈದ್ಯರಿಗೆ ಸೂಚನೆ ನೀಡುತ್ತಾರೆ.

ಪೋಲಿಸ್ ಅಧಿಕಾರಿಗಳ ಸೂಚನೆಯಂತೆ ಗೋಪಾಲನಾಯ್ಕನ ಮೃತ ದೇಹ ಪಿಎಂ ಮಾಡಿದಾಗ ಭಲವಾದ ಪೆಟ್ಟಿನಿಂದ ಮೃತಪಟ್ಟಿರುವುದು ಬೆಳಿಕಿಗೆ ಬಂದಿದ್ದು ವೈದ್ಯಕೀಯ ವರದಿ ಆಧಾರಿಸಿ ಮೃತನ ಪತ್ನಿ ಚಂದ್ರಕಲಾಳನ್ನು ಮೇ 7 ರಂದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಯಲಗಟ್ಟೆ ಬಳಿ ಆಟೋ ಕೆಟ್ಟಿತ್ತು

ಮೂರು ಜನರು ತಳ್ಳಿ ಒಂದು ಮನೆಯ ಬಳಿ ನಿಲ್ಲಿಸಿ ಮನೆಯಲ್ಲಿ ಊಟ ಮಾಡಿಕೊಂಡು ಊರಿಗೆ ಮೂರುಜನರು ಬೈಕ್ ನಲ್ಲಿ ಪ್ರಯಾಣ ಮಾಡುವಾಗ ಗೋಪನಹಳ್ಳಿ ಸಮೀಪ ಪ್ರಯಕರನೊಂದಿಗೆ ಗಂಡ ಗಲಾಟೆ ಮಾಡಿಕೊಂಡು ಭಲವಾಗಿ ತಳ್ಳಿದಾಗ ಡಾಂಬಾರ್ ರಸ್ತೆಗೆ ಬಿದ್ದಿದ್ದಾನೆ ಇದನ್ನು ಮುಚ್ಚಿಹಾಕಲು,

ಪಿಡಿಸು ಖಾಯಿಲೆಯಿಂದ ಬಿದ್ದಿದ್ದಾನೆ ಎಂದು ಸುಳ್ಳು ಕತೆ ಕಟ್ಟಿರುವುದು ಪೋಲಿಸ್ ತನಿಖೆಯಿಂದ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿರುವುದು ಆರೋಪಿ ಪತ್ನಿ ಚಂದ್ರಕಲಾ ಬಾಯಿಬಿಟ್ಟಿದ್ದಾಳೆ.

ರಾಜಶೇಖರ ಬಳ್ಳಾರಿ ಮೂಲದವ ಖಾಸಗಿ ಕಂಪನಿಯ ಮೂಲಕ ಸಾಲ ನೀಡಿ ವಸೂಲಿಗೆ ಬರಿತ್ತಿರುವಾಗ ಬಳ್ಳಾರಿಯ ರಾಜಶೇಖರ ಹಾಗೂ ವೀರದಿಮ್ಮನಹಳ್ಳಿಯ ಚಂದ್ರಕಲಾ ಇಬ್ಬರ ನಡುವೆ ಅನೈತಿಕ ಸಂಬಂದಿಂದ ಪತಿಯನ್ನು ಕೊಲೆ ಮಾಡಿರುವ ಬಗ್ಗೆ ಮೃತ ಗೋಪಾಲನಾಯ್ಕನ ಅಕ್ಕ ಲಕ್ಷ್ಮಿಬಾಯಿ ಕೊಲೆ ಆರೋಪಿಗಳ ವಿರುದ್ದ ಚಳ್ಳಕೆರೆ ಠಾಣೆಯಲ್ಲಿ ದೂರು ನೀಡಲಾಗಿದ್ದು

ಆರೋಪಿ ರಾಜಶೇಖರನ್ನು ಬಂದಿಸಲು ಈಗಾಗಲೇ ಚಳ್ಳಕೆರೆ ಪೋಲಿಸರು ಬಲೆ ಬೀಸಿದ್ದಾರೆ.

Namma Challakere Local News
error: Content is protected !!