ಚಳ್ಳಕೆರೆ : ಧರೆಯಿಂದ ಭೂಲೋಕಕ್ಕೆ ಭಗೀರಥ ಹರಿಸಿದ ಮಹಾನ್ ಯುಗ ಪುರುಷ ಭಗೀರಥರ ಗುಣಗಳನ್ನು ಈಗೀನ ಯುವ ಪೀಳಿಗೆ ಮೈ ಗೂಡಿಸಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ,ಹಾಗೂ ಉಪ್ಪಾರ ಸಮುದಾಯದ ವತಿಯಿಂದ ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿಯಲ್ಲಿ ಭಾವ ಚಿತ್ರಕ್ಕೆ ಪುಷ್ಪ ಮಾಲೆ ಹಾಕುವುದರ ಮೂಲಕ ಮಾತನಾಡಿದರು

ಹಂತ ಹಂತವಾಗಿ ರಾಜಕೀಯ ಸಾಮಾಜಿಕ, ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ಉಪ್ಪಾರ ಸಮಾಜದ ಅಭಿವೃದ್ಧಿ ಗೆ ಕಂಕಣ ಬದ್ದನಾಗಿರುವೆ, ಅಗತ್ಯ ಮೂಲ ಭೂತ ಸೌಕರ್ಯಗಳ ಬಗ್ಗೆ ಗಮನಿಸಿ ಎರಡು ಎಕರೆ ಜಾಗ, ಹಾಗೂ ಕಲ್ಯಾಣ ಮಂಟಪಕ್ಕೆ ಮುಂಬರುವ ಚುನಾವಣೆಯಲ್ಲಿ ಭಗೀರಥ ಆಶೀರ್ವಾದ ಇದ್ದರೆ ಮೂರನೇ ಬಾರಿಗೆ ಶಾಸಕರಾಗಿ ನಿಮ್ಮ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಕಂಕಣ ಬದ್ಧನಾಗಿರುವೆ ಎಂದರು

ಪ್ರಾಸ್ತವಿಕವಾಗಿ ತಹಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ,
ಭಗೀರಥನು ಸಾಗರ ರಾಜವಂಶದ ರಾಜಕುಮಾರನಾದ ನಂತರ, ತನ್ನ ಪೂರ್ವಜರ ಭೀಕರ ಅಂತ್ಯವನ್ನು ಕಲಿತು, ದೇವತೆಗಳ ಪ್ರದೇಶವನ್ನು ಸಾಧಿಸಲು ಸಾಧ್ಯವಾಗಲಿಲ್ಲ, ಅವನು ತನ್ನ ಮಂತ್ರಿಗೆ ತನ್ನ ರಾಜ ಕರ್ತವ್ಯಗಳನ್ನು ವಹಿಸಿಕೊಟ್ಟನು ಮತ್ತು ಹಿಮಾಲಯದಲ್ಲಿ ತಪಸ್ಸಿಗೆ ಹೋದನು ಎಂದು ಹೇಳಲಾಗುತ್ತದೆ ಎಂದು ಉಲ್ಲೇಖವಿದೆ ಎಂದರು.

ಸಂಘದ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ತಾಲೂಕಿನ ಐವತ್ತಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ನಲವತ್ತು ಸಾವಿರ ಜನಸಂಖ್ಯೆ ಹೊಂದಿದ್ದೆವೆ, ಕ್ಷೇತ್ರದ ಜನರು ತೀರ ಮುಗ್ದತೆಯಿಂದ ಜನರು ಜೀವನ ನಡೆಸುತ್ತಿದ್ದೆವೆ ಆದ್ದರಿಂದ ಶೈಕ್ಷಣಿಕ ಅಭಿವೃದ್ಧಿ ಹೊಂದಲು ಶಾಸಕರ ಸಹಾಯ ಅಗತ್ಯ ಎಂದರು.

ಗೌರವ ಅಧ್ಯಕ್ಷ ಸಣ್ಣ ಎಲ್ಲಪ್ಪ ಮಾತನಾಡಿ, ರಾಜಕೀಯವಾಗಿ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದೂಳಿದ ಸಮುದಾಯದ ಅಭಿವೃದ್ಧಿಗೆ ಮುಂದಿನ ಪೀಳಿಗೆಗೆ ಕಲ್ಯಾಣ ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ಕಟ್ಟಲು ತಹಶೀಲ್ದಾರ್ ಜಾಗ ನೀಡಬೇಕು ಅದಕ್ಕೆ ತಕ್ಕಂತೆ ಶಾಸಕ ಟಿ.ರಘುಮೂರ್ತಿ ಕಲ್ಯಾಣ ಮಂಟಪ ಕಟ್ಟಿಸಬೇಕು ಎಂದು ಮನವಿ ನೀಡಿದರು.

ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ ಟಿ .ರಮೇಶ್ ಗೌಡ, ಸದಸ್ಯ ರಾಘವೇಂದ್ರ, ಮಲ್ಲಿಕಾರ್ಜುನ್ ,

ಉಪ್ಪಾರ ಸಮುದಾಯ
ಗೌರವ ಅಧ್ಯಕ್ಷ ಯಲ್ಲಪ್ಪ ತಾಲೂಕಾಧ್ಯಕ್ಷ ಹನುಮಂತಪ್ಪ ಉಪ್ಪಾರ್ ಉಪಾಧ್ಯಕ್ಷರಾದ ನಾಗರಾಜ, ನೀಲಕಂಠ, ರಾಮಕೃಷ್ಣ , ಎಲ್ಐಸಿ ರಂಗಸ್ವಾಮಿ, ನರಸಿಂಹ, ನಗರರಂಗೆರೆ ಗ್ರಾ.ಪಂ ಅಧ್ಯಕ್ಷ ಪಾತಲಿಂಗಪ್ಪ, ಪರಶುರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ, ಪೌರಾಯುಕ್ತೆ ಲೀಲಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್.ಸುರೇಶ್,
ಸಮಾಜದ ಮುಖಂಡ ಹನುಮಂತಪ್ಪ, ರವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಈರಣ್ಣ, ಕಾರ್ಯದರ್ಶಿ ಹನುಮಂತಪ್ಪ, ಅರುಣಾ, ಎಸ್ ಟಿ.ತಿಪ್ಪೇಸ್ವಾಮಿ, ವೆಂಕಟೇಶ್,
ಪತ್ರಕರ್ತ ಗೋಪನಹಳ್ಳಿ ಶಿವಣ್ಣ, ಎಚ್ ಎಸ್ ಸೈಯಾದ್ ಸಾಬ್, ಇತರರು ಇದ್ದರು

Namma Challakere Local News
error: Content is protected !!