ಚಳ್ಳಕೆರೆ ನ್ಯೂಸ್ :
ಬಯಲು ಸೀಮೆಯಲ್ಲಿ ಬಿಸಿಲಿನ ತಾಪಕ್ಕೆ ಹೈರಾಣದ ಜನತೆಗೆ ಮಳೆರಾಯ ಕರುಣೆ ತೋರಿ ಮಳೆಸುರಿಸಿದ್ದಾನೆ
ಅದರಂತೆ ಅಪರೂಪಕ್ಕೆ ಬಂದ ಗುಡುಗು ಗಾಳಿ ಸಹಿತ ಮಳೆಗೆ
ಪಸಲಿಗೆ ಬಂದ ಬಾಳೆ ನೆಲಕಚ್ಚಿದ್ದು ರೈತನನ್ನು ಆತಂಕ್ಕೀಡು ಮಾಡಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಕೂರು ವಿಧಾನ ಸಭಾ
ಕ್ಷೇತ್ರ ವ್ಯಾಪ್ತಿಯ ಓಬಳಾಪುರ ಗ್ರಾಪಂ ವ್ಯಾಪ್ತಿಯ ಓಬಳಾಪುರ
ಪಂಚಾಯತಿ ವ್ಯಾಪ್ತಿಯ ಪಾತಪ್ಪನಗುಡಿ ಗ್ರಾಮದ ರೈತ
ಜಿ.ಎಂ.ಚಂದ್ರಣ್ಣ ಇವರ 9 ಎಕರೆ ಜಮೀನಿನ ಬಾಳೆತೋಟದಲ್ಲಿ
ಸೋಮವಾರ ಸಂಜೆ 7 ಗಂಟೆ ಸುಮಾರಿನಲ್ಲಿ ಗುಡುಗು ಸಹಿತ
ಬಿರುಗಾಳಿಗೆ ಮಳೆಗೆ ಪಸಲಿಗೆ ಬಂದ ಬಾಳೆ ಗಿಡಗಳು ನೆಲ್ಲುರಳಿ
ಮುರಿದುಬಿದ್ದು ಅಪಾರ ನಷ್ಟವಾಗಿದ್ದು ಸಾಲ ಸೂಲ ಮಾಡಿ ಹಾಕಿದ
ಬಂಡವಾಳ ಕೈಸೇರದೆ ಸಂಕಷ್ಟಕ್ಕೀಡು ಮಾಡುವಂತಾಗಿದ್ದು
ಸಂಬಂಧಪಟ್ಟ ಇಲಾಖೆ ರೈತರಿಗೆ ಬೆಳೆ ಹಾನಿ
ಪರಿಹಾರದೊರಕಿಸಿಕೊಡುವರೇ ಕಾದು ನೋಡ ಬೇಕಿದೆ.