ಚಳ್ಳಕೆರೆ ನ್ಯೂಸ್ :
ಮರು ಪರಿಶೀಲಿಸಿ ಪರಿಹಾರ ವಿತರಣೆಗೆ ಕ್ರಮ: ಡಿಸಿ
ವೆಂಕಟೇಶ್
ಬೆಳೆ ಸಮೀಕ್ಷೆಯಲ್ಲಿ ಉಂಟಾದ ವ್ಯತ್ಯಾಸದಿಂದ ಚಳ್ಳಕೆರೆ ತಾಲ್ಲೂಕಿನ
ಸೋಮಗುದ್ದು, ಎನ್. ದೇವರಹಳ್ಳಿ ಗ್ರಾಮ ಪಂಚಾಯಿತಿ ಸೇರಿದಂತೆ
ಜಿಲ್ಲೆಯ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆ ಆಗದಿರುವುದು
ಗಮನಕ್ಕೆ ಬಂದಿದೆ.
ಈ ಭಾಗದ ರೈತರ ಜಮೀನುಗಳಲ್ಲಿ ಪುನಃ
ಮರು ಪರಿಶೀಲಿಸಿ, ಬೆಳೆವಿಮೆ ಪರಿಹಾರ ವಿತರಣೆಗೆ ಅಗತ್ಯ
ಕ್ರಮಕೈಗೊಳ್ಳಲಾಗುವುದೆಂದು ಡಿಸಿ ಟಿ. ವೆಂಕಟೇಶ್ ರೈತರಿಗೆ
ಭರವಸೆ ನೀಡಿದರು.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಳೆವಿಮೆ
ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.