ಚಳ್ಳಕೆರೆ ನ್ಯೂಸ್ :

ಚಳ್ಳಕೆರೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾಪಂ ಪಿಡಿಗಳಿಗೆ
ಆಯೋಜಿಸಿದ್ದ ಕುಡಿಯುವ ನೀರಿನ ಪ್ರಗತಿಪರಿಶೀಲನಾ ಸಭೆಯ
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಪಂ. ಇಓ ಲಕ್ಷ್ಮಣ್, ತೋಟದಲ್ಲಿ ಇಪ್ಪತ್ತು
ಮನೆಗಳಿದ್ದರೂ ನೀರುಕೊಡಿ ಎಂದು ಕೇಳುತ್ತಾರೆ ಮಜರೆ ಗ್ರಾಮ
ಇಪ್ಪತೈದಕ್ಕಿಂತ ಹೆಚ್ಚು ಮನೆಗಳಿದ್ದರೆ ನೀಡಬಹುದು
ಹೊಸ ಬೋರ್ ಕೊರೆಸಿದರೂ ನೀರು ಬರುತ್ತಿಲ್ಲ ಇರುವ ಬೋರ್
ನಲ್ಲೇ ಇರುವ ನೀರು ಬಳಕೆ ಮಾಡಿ
ಟ್ಯಾಂಕರ್ ನೀರು ಸರಬರಾಜು ಮಾಡುವಾಗ ಕುಡಿಯುವ ನೀರು
ಸರಬರಾಜ್ ಎಇಇ.ಗ್ರಾಮಲೆಕ್ಕಾಧಿಕಾರಿ ಹಾಗೂ ಪಿಡಿಒ ಮೂರು
ಜನರು ಜಂಟಿ ಮಹಜರ್ ಮಾಡಿ ನೀರು ಸರಬರಾಜ್ ಮಾಡ ಬೇಕು.

ಒಬ್ಬ ವ್ಯಕ್ತಿಗೆ ಕನಿಷ್ಟ30 ಲೀಟರ್ ನೀರು ಒದಗಿಸ ಬೇಕು. ಸರಕಾರಿ
ಖಾಸಗಿ ಕೊಳವೆ ಬಾವಿಗಳಲ್ಲಿ ಎಷ್ಟು ನೀರು ಲಭ್ಯವಿದೆ ನೀರಿನ ಲಭ್ಯತೆ
ನೋಡಿಕೊಂಡು ಸರಬರಾಜ್ ಮಾಡ ಬೇಕು .

ನೀರು
ಪೋಲಾಗುವುನ್ನು ತಡೆಯ ಬೇಕು, ಈಗ ಶಾಲಾ ಕಾಲೇಜ್, ವಸತಿ
ನಿಲಯಗಳು ರಜೆ ಇರುವುದರಿಂದ ಅಲ್ಲಿ ಲಭ್ಯವಾಗುವ ನೀರನ್ನು ಜನ
ಜಾನುವಾರುಗಳಿಗೆ ಶಾಲಾ ಕಾಲೇಜುಗಳು ಪ್ರಾರಂಭವಾಗುವ ತನಕ
ನೀಡಿ, ಕೆಲವರು ಕಕುಡಿಯುವ ನೀರನ್ನು ಬಳಕೆ ಮಾಡಿಕೊಂಡು
ತೋಟ ಬೆಳೆಸುತ್ತಾರೆ ಇಂತವುಗಳ ಸಂಪರ್ಕ ಕಡಿತ ಗೊಳಿಸಿ ಎಂದು
ತಾಕೀತು ಮಾಡಿದರು.

ಸಭೆಯಲ್ಲಿ ಕುಡಿಯುವ ನೀರು ಸರಬರಾಜ್ ಎಇಇ ದಯಾನಂದ್.
ತಾಪಂ ಸಹಾಯಕ ನಿರ್ದೇಶಕ ಸಂಪತ್. ಲೆಕ್ಕ ಸಹಾಯಕಾಧಿಕಾರಿ
ಕೆಂಚಪ್ಪ. ಜೆಇ ಗಳಾದ ತಿಪ್ಪೇಸ್ವಾಮಿ.ಮನೋಹರ್. ಗ್ರಾಪಂ
ಪಿಡಿಒಗಳು ಉಪಸ್ತರಿತರಿದ್ದರು

Namma Challakere Local News
error: Content is protected !!