ಚಳ್ಳಕೆರೆ ನ್ಯೂಸ್ :
ಬಯಲು ಸೀಮೆಯಲ್ಲಿ ಕುಡಿಯುವ ನೀರಿಗಾಗಿ ಪರಿತಪ್ಪಿಸುವ ಸದಿಗ್ದ ಪರಿಸ್ಥಿತಿಯಲ್ಲಿ ವೇದಾವತಿ ನದಿಯಲ್ಲಿ ನೀರನ್ನು ಕಂಡ ರೈತಾಪಿ ವರ್ಗ ಕೊಂಚ ನಿರಾಳವಾಗಿದ್ದಾರೆ.
ಹೌದು ಚಳ್ಳಕೆರೆ ತಾಲೂಕಿನ ಮೈಲನಹಳ್ಳಿ ಗ್ರಾಮ ಪಂಚಾಯತಿಯ ಕಸವಿಗೊಂಡನಹಳ್ಳಿ ಗ್ರಾಮದ ಸಮೀಪ ನಿರ್ಮಾಣವಾದ ಬ್ರಿಡ್ಜ್ ಕಮ್ ಬ್ಯಾರೇಜ್ ಈ ಭಾಗದ ಜನತೆಗೆ ವರದಾನವಾಗಿದೆ.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನೇರ ರಸ್ತೆ ಮಾರ್ಗ ಇರದ ಗ್ರಾಮ ಎಂದರೆ ಅದು ಕಸವಿಗೊಂಡನಹಳ್ಳಿ ಗ್ರಾಮವಾಗಿತ್ತು.
ಆದರೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣದಿಂದ ನೇರ ರಸ್ತೆ ಮಾರ್ಗ ದೊರೆತಿದೆ.
ಇನ್ನೂ ಚಳ್ಳಕೆರೆ ತಾಲ್ಲೂಕಿನ ಮೈಲನಹಳ್ಳಿ ಸಮೀಪದ ಕಸವಿಗೊಂಡನಹಳ್ಳಿ ಹಾದಿಯಲ್ಲಿ ಬರುವ ವೇದಾವತಿ ನದಿಗೆ ಅಡ್ಡಲಾಗಿ ಮಾಡಿಸಿದ “ಬ್ರಿಡ್ಜ್ ಕಮ್ ಬ್ಯಾರೇಜ್” ನ ಕೆಲಸ ಪೂರ್ಣಗೊಂಡಿದ್ದು, ಮಾರಿ ಕಣಿವೆ ಜಲಾಶಯದಿಂದ ಬೇಸಿಗೆ ಕಾಲದ ನೀರು ಬಿಡುಗಡೆ ಮಾಡಿದ್ದು,
ಇಂದು ಮುಂಜಾನೆ ಬ್ರಿಡ್ಜ್ ಕಮ್ ಬ್ಯಾರೇಜ್ ತುಂಬಿ ಹರಿಯುತ್ತಿದೆ.
ಸತತ ಬರದಿಂದ ಕಂಗೆಟ್ಟಿದ್ದ ರೈತರ ಪಾಲಿಗೆ ಭಗೀರಥರಾದ ಅಂದಿನ ಜನಪ್ರತಿನಿಧಿಗಳನ್ನು ನೆನೆಯುತ್ತಾ ಸಂತೋಷ ವ್ಯಕ್ತಪಡಿಸುತ್ತಾರೆ.
ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದಿಸಿದ ಹಿಂದಿನ ಸರ್ಕಾರದ ಅವಧಿಯಲ್ಲಿ ಸಣ್ಣ ನೀರಾವರಿ & ಕಾನೂನು ಸಂಸದೀಯ ವ್ಯವಹಾರಗಳ ಸಚಿವರನ್ನು ನೆನೆಯುತ್ತಾ ಮೈಲನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆಯ ಕೃತಜ್ಞತೆಯ ಭಾವದೊಂದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.