ಚಳ್ಳಕೆರೆ : ಅಕ್ರಮವಾಗಿ ಖಾಸಗಿ ವ್ಯಕ್ತಿಯೊಬ್ಬ ಗ್ರಾಮದ ಚರಂಡಿ ಮುಚ್ಚಿ ಮನೆ ನಿರ್ಮಾಣ ಮಾಡಿಕೊಂಡಿದ್ದಾನೆ ಎಂಬ ಆರೋಪದ ಮೇಲೆ ಇಂದು ಪರೀಶಿಲನೆ ನಡೆಸಿದ ತಹಶೀಲ್ದಾರ್ ನೇತೃತ್ವದ ತಂಡ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.

ಹೌದು ಚಳ್ಳಕೆರೆ ತಾಲೂಕಿನ ನಗರಂಗೆರೆ ಪಂಚಾಯತಿ ವ್ಯಾಪ್ತಿಯ ಲಕ್ಷ್ಮಿಪುರ ಗ್ರಾಮದ ಸರ್ವೆ ನಂಬರ್ 43ನಲ್ಲಿ ಸಾರ್ವಜನಿಕ ಸಂಪರ್ಕವಿರುವ ಚರಂಡಿಯನ್ನು ಖಾಸಗಿ ವ್ಯಕ್ತಿಯೊಬ್ಬ ಅಡ್ಡಿಪಡಿಸಿದ್ದ ಎನ್ನುವ ಆರೋಪದಡಿ ಗ್ರಾಮದಲ್ಲಿ ಪರಿಶೀಲನೆ ನಡೆಸಿದಾಗ ಗ್ರಾಮಕ್ಕೆ ಹೊಂದಿಕೊಂಡಿರುವ ಚರಂಡಿಯನ್ನು ತನ್ನದೇ ಎಂದು ಹೇಳಿಕೊಂಡು ಯಾವುದೇ ರೀತಿಯ ದಾಖಲೆ ಇಲ್ಲದೆ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿಕೊಂಡು ಚರಂಡಿಯನ್ನು ಮುಚ್ಚಲಾಗಿತ್ತು.

ಸಾರ್ವಜನಿಕರು ತಾಲೂಕು ಕಚೇರಿಗೆ ಬಂದು ಅವರ ವಿರುದ್ಧ ದೂರನ್ನು ನೀಡಿದ್ದರು ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ತಹಶೀಲ್ದಾರ್ ಎನ್.ರಘುಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರಿಗೆ ತಿಳಿಹೇಳಿ ಸಮಸ್ಯೆಯನ್ನು ಬಗೆಹರಿಸಿದರೆ ಇದರಿಂದ ಗ್ರಾಮದಲ್ಲಿ ಸಾಮರಸ್ಯೆ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.

About The Author

Namma Challakere Local News
error: Content is protected !!