ಚಿತ್ರದುರ್ಗದ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಅವರು ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಪ್ರಭಾಕರ ಮ್ಯಾಸನಾಯಕ ತಿಳಿಸಿದರು.
ಇಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಲುವೆಹಳ್ಳಿ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ಇದು ದೇಶದ ಚುನಾವಣೆ ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಸಸ್ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ನಡುವೆ ನಡೆಯುತ್ತಿರುವ ಚುನಾವಣೆ ಇದಾಗಿದೆ. ಹಾಗಾಗಿ ದೇಶಕ್ಕಾಗಿ ನರೇಂದ್ರ ಮೋದಿಯವರ ನೇತೃತ್ವದ ಎನ್.ಡಿ.ಎ ಸರ್ಕಾರ ಮತ್ತೊಮ್ಮೆ ಬರಬೇಕು ಅಭಿವೃದ್ಧಿಗೆ ವೇಗ ಪಡೆಯುವಂಥ ಸರ್ಕಾರ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಈ ಬಾರಿ ಬಿಜೆಪಿಯ ಕಮಲದ ಗುರುತಿಗೆ ಮತ ನೀಡುವ ಮುಖೇನ ಗೋವಿಂದ ಕಾರಜೋಳ ಅವರು ಅತ್ಯಧಿಕ ಮತಗಳ ಅಂತರದಲ್ಲಿ ಜಯಗಳಿಸಲು ತಾವೆಲ್ಲರೂ ಕೂಡ ಸಾಥ್ ನೀಡಬೇಕು ಎಂದು ಮನವಿ ಮಾಡಿದರು.
ಗೋವಿಂದ ಕಾರಜೋಳ ಅವರು ಸಜ್ಜನ ರಾಜಕಾರಣಿ, ಸಮಾಜಮುಖಿ ಚಿಂತನೆಯಲ್ಲಿ ಮೊದಲಿಗರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಲೋಕೋಪಯೋಗಿ ಇಲಾಖೆ ಖಾತೆ ಸಚಿವರಾಗಿದ್ದಾಗ ಮೊಳಕಾಲ್ಮೂರು ಕ್ಷೇತ್ರದ ಅನೇಕ ರಸ್ತೆಗಳ ಅಭಿವೃದ್ಧಿಗೆ ಅನುದಾನವನ್ನು ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಸಮುದಾಯಕ್ಕೆ ತಮ್ಮದೇ ಆಗಿರುವಂತಹ ಕೊಡುಗೆಗಳನ್ನು ನೀಡಿದ್ದಾರೆ.
ಬಡವರ ಪರವಾಗಿ ಕಾಳಜಿ ಇರುವಂಥ ಮನುಷ್ಯ ಹಾಗಾಗಿ ಗೋವಿಂದ ಕಾರಜೋಳ ಅವರಿಗೆ ನಿಮ್ಮ ಮತ ನೀಡುವ ಮುಖೇನ ಅವರಿಗೆ ಬೆಂಬಲಿಸಬೇಕು ಎಂದು ಪ್ರಭಾಕರ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಮಾತನಾಡಿ ಕಾಲುವೆಹಳ್ಳಿಯ ಮತಗಟ್ಟೆಗಳಿಂದ ಅತಿ ಹೆಚ್ಚು ಮತ ಕೊಡಿಸಬೇಕು ಗೌರವದ ಪ್ರಶ್ನೆ ಇದಾಗಿದೆ ಎಂದರು.
ಈ ಸಮಯದಲ್ಲಿ ನಾಯಕನಹಟ್ಟಿ ಮಂಡಲ ಬಿಜೆಪಿ ಘಟಕದ ಅಧ್ಯಕ್ಷ ರಾಮರೆಡ್ಡಿ ಕಾರ್ಯದರ್ಶಿ ಪ್ರಕಾಶ ರೆಡ್ಡಿ ಕಾಲುವೆ ಹಳ್ಳಿಯ ಮುಖಂಡ ಶ್ರೀನಿವಾಸ್. ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ರಂಗಣ್ಣ ಘಟಪರ್ತಿಯ ಯುವ ಮುಖಂಡ ನವೀನ್ .ಮಲ್ಲಿಕಾರ್ಜುನ್. ಗೋವಿಂದಪ್ಪ ಮತ್ತಿತರರಿದ್ದರು