ಚಳ್ಳಕೆರೆ ನ್ಯೂಸ್ :
ಕಾರಜೋಳ ಗೆಲುವು ಸೂರ್ಯ ಚಂದ್ರರಷ್ಟೆ ಸತ್ಯ
ರಾಜ್ಯದ ಎಲ್ಲೆಡೆ ಬಿಜೆಪಿ ಅಲೆ ಇದೆ. ಗೋವಿಂದ ಕಾರಜೋಳ
ಗೆಲ್ಲುವುದು, ಸೂರ್ಯ ಚಂದ್ರ ಇರುವಷ್ಟು ಸತ್ಯ ಎಂದು ಮಾಜಿ ಸಿಎಂ
ಯಡಿಯೂರಪ್ಪ ಹೇಳಿದ್ದಾರೆ.
ಅವರು ಹೊಳಲ್ಕೆರೆ ಕ್ಷೇತ್ರದ
ಭರಮಸಾಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತಾಡಿದರು.
ವಿಶೇಷವಾಗಿ ಹೊಳಲ್ಕೆರೆ ಶಾಸಕ ಚಂದ್ರಪ್ಪ ಮತ್ತು ಅವರ ಪುತ್ರ
ರಘುಚಂದನ್ ಕೆಲಸ ಮಾಡಬೇಕು.
ಕಾಂಗ್ರೆಸ್ ಪೊಳ್ಳು ಗ್ಯಾರಂಟಿಗಳ
ಮೇಲೆ ಮತದಾರರಿಗೆ ವಿಶ್ವಾಸ ಇಲ್ಲ. ಮೋದಿ ಗ್ಯಾರಂಟಿಗಳನ್ನು ಕೊಡುತ್ತಿದ್ದಾರೆ. ಅದಕ್ಕೆ
ಮೋದಿಯೇ ಗ್ಯಾರಂಟಿಯಾಗಿದ್ದಾರೆ ಎಂದರು.
ಮೋದಿ ಕೈ ಬಲ ಪಡಿಸಲು ನನ್ನನ್ನು ಗೆಲ್ಲಿಸಿ ಕಳುಹಿಸಿ
ಲೋಕಸಭಾ ಚುನಾವಣೆಗೆ ಕೇವಲ ಇನ್ನು ನಾಲ್ಕು ದಿನಗಳ
ಬಾಕಿ ಇದೆ.
ಮೋದಿ 3 ನೇ ಬಾರಿ ಪ್ರಧಾನಿಯಾಗಬೇಕಿದೆ.
ಪ್ರತಿಯೊಬ್ಬರೂ, ಅವರ ಕೈ ಬಲಪಡಿಸಲು ನನ್ನ ಈ ಬಾರಿ ಗೆಲ್ಲಿಸಿ
ಸಂಸತ್ತಿಗೆ ಕಳುಹಿಸಕೊಡಬೇಕೆಂದು ಮತದಾರರಲ್ಲಿ ಚಿತ್ರದುರ್ಗ
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ
ಮತದಾರರಲ್ಲಿ ಮನವಿ ಮಾಡಿದರು.
ಜಿಲ್ಲೆಯ ಅಪ್ಪರ್ ಭದ್ರಾ ಪೂರ್ಣಗೊಳಿಸಬೇಕು, ಇದಕ್ಕಾಗಿ
ನೀವೆಲ್ಲರೂ ಮತ ನೀಡಬೇಕೆಂದರು.