ಚಳ್ಳಕೆರೆ ನ್ಯೂಸ್ : ಲೋಕ ಅಖಾಡಕ್ಕೆ ಕೆಲವೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಕಲ್ಲಿನ ಕೋಟೆ ಚಿತ್ರದುರ್ಗ ಲೋಕಸಭಾ ಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಗೆ ಮೂರು ಪಕ್ಷಗಳಿಂದ ಮತದಾರ ಓಲೈಕೆಯಲ್ಲಿ ಭರ್ಜರಿ ತಾಲೀಮು ನಡೆಸುತ್ತಿವೆ.
ಅದರಂತೆ ಕಾಂಗ್ರೇಸ್‌ನಿAದ ಬಿಎನ್.ಚಂದ್ರಪ್ಪ ರವರು ಗೆಲುವಿಗಾಗಿ ಹಿನ್ನಿಲ್ಲದ ಕಸರತ್ತು ಕೂಡ ಮಾಡುತ್ತಿದ್ದಾರೆ ಎದುರಾಳಿ ಬಿಜೆಪಿ ಅಭ್ಯರ್ಥಿಯನ್ನು ಮಣಿಸಲು ಹಾಗೂ ಕೇಂದ್ರ ಸರಕಾರ ವೈಫಲ್ಯಗಳನ್ನು ಮತದಾರರಿಗೆ ತಿಳಿಸುವ ಮೂಲಕ ಈ ಬಾರಿ ಕಾಂಗ್ರೇಸ್ ಗೆ ಮತ ನೀಡಿ ಎಂಬ ಧ್ವನಿ ಈಡೀ ಕ್ಷೇತ್ರದಲ್ಲಿ ಪ್ರಜ್ವಲಿಸುತ್ತಿದೆ.
ಅದರಂತೆ ಬಿಎನ್.ಚಂದ್ರಪ್ಪ ಪರವಾಗಿ ನಿಂತ ಈಡೀ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರದಲ್ಲಿ 7ವಿಧಾನಸಭಾ ಕ್ಷೇತ್ರಗಳ ಶಾಸಕರು ಟೊಂಕ ಕಟ್ಟಿ ಚಂದ್ರಪ್ಪ ಗೆಲುವಿಗೆ ಹಗಲಿರುಳು ಶ್ರಮಿಸುತ್ತಾ, ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.
ದೇಶದ ಸುಭದ್ರತೆಗೆ, ಪ್ರಜಾಪ್ರಭುತ್ವ ಉಳಿವಿಗೆ ಈ ಬಾರಿ ಕಾಂಗ್ರೇಸ್‌ನ್ನು ಬೆಂಬಲಿಸಿ ಎಂಬ ಕೂಗು ಕ್ಷೇತ್ರÀದಲ್ಲಿ ದಟ್ಟವಾಗಿದೆ.
ಅದರಂತೆ ಈಡೀ ಜಿಲ್ಲೆಯಲ್ಲಿ ಕಾಂಗ್ರೇಸ್ ಭದ್ರ ಕೋಟೆಯಾಗಿರುವ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಹ್ಯಾಟ್ರಿಕ್ ಹಿರೋ ಎಂದು ಬಿಂಬಿತರಾಗಿರುವ ಶಾಸಕ ಟಿ.ರಘುಮೂರ್ತಿ ಮೂರು ಬಾರಿ ಕಾಂಗ್ರೇಸ್ ಪಕ್ಷದಿಂದ ಗೆಲುವು ಸಾಧಿಸಿ ತಮ್ಮ ಕ್ಷೇತ್ರವನ್ನು ಕಾಂಗ್ರೇಸ್ ಭದ್ರ ಕೋಟೆಯನ್ನಾಗಿಸಿಕೊಂಡಿದ್ದಾರೆ.
ಅಷ್ಟೆ ಅಲ್ಲದೆ ಗ್ರಾಮ ಪಂಚಾಯಿತಿ ಮಟ್ಟದಿಂದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆಯಲ್ಲಿ ತಮ್ಮ ಪಾರುಪತ್ಯ ಹೊಂದಿದ ಕಾಂಗ್ರೇಸ್, ಈ ಬಾರಿ ಚಂದ್ರಪ್ಪ ಪರವಾಗಿ ನಿಂತಿದೆ.
ಇನ್ನೂ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಭದ್ರ ಕೋಟೆಯಾಗಿರುವ ಈಡೀ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಮತಗಳು ನೀಡಬೇಕು ಎಂಬ ನಿಲುವಿನಿಂದ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಅದರಂತೆ ಇಂದು ಚಳ್ಳಕೆರೆ ಕ್ಷೇತ್ರದ ನನ್ನಿವಾಳ ಜಿಪಂ ವ್ಯಾಪ್ತಿಯ ಸುಮಾರು ಹಳ್ಳಿಗಳಿಗೆ ತೆರಳಿ ಕಾಂಗ್ರೇಸ್ ಅಭ್ಯರ್ಥಿ ಬಿಎನ್.ಚಂದ್ರಪ್ಪ ಪರವಾಗಿ ಶಾಸಕ ಟಿ.ರಘುಮೂರ್ತಿ ಮತಯಾಚನೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಇಂತಹ ಬರಗಾಲದಲ್ಲಿ ಕೂಡ ಬಡವರ ಅನ್ನಕ್ಕಾಗಿ ಅಂಗಲಾಚಬಾರದು ಎಂದು ಅಕ್ಕಿಭಾಗ್ಯ ನೀಡುವ ಮೂಲಕ ಬಡವರ ಹೊಟ್ಟೆ ತುಂಬಿಸಿದೆ ಐದು ಗ್ಯಾರಂಟಿಗಳ ಇಂದು ಎಲ್ಲಾ ವರ್ಗದ ಜನರಿಗೆ ದಾರಿದೀಪವಾಗಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಸದಸ್ಯರು ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳು ಯುವ ಕಾಂಗ್ರೆಸ್ ಅಧ್ಯಕ್ಷರು,ಸದಸ್ಯರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ನಗರಸಭಾ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ವಿವಿಧ ನಾಮನಿರ್ದೇಶನ ಸದಸ್ಯರುಗಳು ಸಾರ್ವಜನಿಕರು ಮುಖಂಡರು, ಕಾರ್ಯಕರ್ತರು ಉಪಸ್ಥಿತಿದ್ದರು.

About The Author

Namma Challakere Local News
error: Content is protected !!