ಚಳ್ಳಕೆರೆ ನ್ಯೂಸ್ :
ಅನ್ಯ ಕೋಮಿನ ಯುವತಿಯನ್ನು ಡ್ರಾಪ್ ಮಾಡಿದ್ದಕ್ಕೆ
ಥಳಿತಕ್ಕೊಳಗಾದ ಯುವಕ
ಅನ್ಯ ಕೋಮಿನ ಯುವತಿಯನ್ನು ಮನೆಗೆ ಬಿಡಲು ಹೋಗುತ್ತಿದ್ದ
ಯುವಕನನ್ನು ಅಡ್ಡಗಟ್ಟಿ, ಕಲ್ಲು ಕೋಲುಗಳಿಂದ ಹಲ್ಲೆ ಮಾಡಿದ್ದಷ್ಟೆ
ಅಲ್ಲದೆ, ಮರ್ಮಾಂಗಕ್ಕೂ ಹೊಡೆದಿರುವ ಘಟನೆ ಚಿತ್ರದುರ್ಗ
ನಗರದ ಚೋಳಗಟ್ಟದ ಬಳಿ ನಡೆದಿದೆ.
ಈರಜ್ಜನಹಟ್ಟಿ ಗ್ರಾಮದ
ಯುವಕ ಉಮೇಶ್ ನಾಯಕ, ಅನ್ಯ ಕೋಮಿನ ಯುವತಿ ಇಬ್ಬರು
ಒಂದೆಡೆ ಕೆಲಸ ಮಾಡುತ್ತಿದ್ದು, ಚೋಳಗಟ್ಟದಲ್ಲಿ ಯುವತಿ ಬಿಟ್ಟು,
ಹೋಗುವಾಗ, ಅಡ್ಡಗಟ್ಟಿದ ಅನ್ಯ ಕೋಮಿನ ಐದು ಜನ ಯುವಕರು
ಕೋಲುಗಳಿಂದ ಥಳಿಸಿದ್ದಾರೆ.
ಚಿತ್ರದುರ್ಗ ದ
ಕೋಟೆ ಠಾಣೆಯಲ್ಲಿ ಈ ಪ್ರಕರಣ
ದಾಖಲಾಗಿದೆ.