ಚಿತ್ರದುರ್ಗ
ಸಂಪಿನಲ್ಲಿ ತಾಯಿ ಮಗಳ ಶವ ಪತ್ತೆ.
ಚಿತ್ರದುರ್ಗ:
ತುರುವನೂರು ರಸ್ತೆಯ ತಿಪ್ಪೇರುದ್ರಸ್ವಾಮಿ ಆಶ್ರಮದ ನೀರಿನ ಸಂಪಿನಲ್ಲಿ
ತಾಯಿ
ಮತ್ತು ಮಗಳ ಶವ ಪತ್ತೆಯಾಗಿದ್ದು, ಅನುಮಾನಾಸ್ಪದವಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಭದ್ರಾವತಿಯ ಗೀತಾ (40) ಹಾಗೂ ಪ್ರಿಯಾಂಕಾ (22) ಮೃತಪಟ್ಟವರು. ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಪೂಜೆ ಮಾಡಿಕೊಂಡು ಆಶ್ರಮದಲ್ಲಿ ವಾಸವಾಗಿದ್ದರು.
ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಆಶ್ರಮದಲ್ಲಿ ಗೀತಾ ಅವರು ಕುಟುಂಬ ಸಮೇತ ವಾಸವಾಗಿದ್ದರು. ಮಂಗಳವಾರ ಸಂಜೆ ಪತಿ ಮತ್ತು ಮಗ ಆಶ್ರಮದಿಂದ ಹೊರಹೋಗಿದ್ದರು. ರಾತ್ರಿ ಆಶ್ರಮಕ್ಕೆ ಮರಳಿದಾಗ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಬಡಾವಣೆ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನೂ ಹೆಚ್ಚಿನ ತನಿಖೆ ಪೊಲೀಸ್ ತನಿಖೆಯಿಂದ ಹೊರಬಿಳಲಿದೆ