ಚಳ್ಳಕೆರೆ ನ್ಯೂಸ್ ‌:

2024ರ ಲೋಕಸಭಾ ಚುನಾವಣೆ ಅಂಗವಾಗಿ ಚಳಕೆರೆ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಪ್ರತಿದಿನವೂ ಹಮ್ಮಿಕೊಳ್ಳಲಾಗುತ್ತಿದೆ.

ಅದರಂತೆ ಇಂದು ಚಿತ್ರದುರ್ಗ ರಸ್ತೆಯ ಶ್ರೀ ವಾಲ್ಮೀಕಿ ವೃತ್ತದಲ್ಲಿ ನಗರಸಭೆ ಹಾಗೂ ತಾಲೂಕು ಪಂಚಾಯತ ಸಹಯೋಗದೊಂದಿಗೆ
ಮಹಿಳಾ ಸ್ವಸಹಾಯ ಸಂಘ ಹಾಗೂ ನರೇಗಾ ಮಹಿಳೆಯರ ಮೂಲಕ ಮತದಾನ ಜಾಗೃತಿಗಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ರಂಗೋಲಿ ಸ್ಪರ್ಧೆಗೆ ನಗರಸಭೆ ಆರೋಗ್ಯ ಅಧಿಕಾರಿಗಳಾದ ಸುನಿಲ್ ಹಾಗೂ ಸಿಬ್ಬಂದಿ ವರ್ಗ ಸ್ಥಳದಲ್ಲೇ ಇದ್ದು ರಂಗೋಲಿ ಸ್ಪರ್ಧಾಳುಗಳುಗಳಿಗೆ ಮತದಾನ ಜಾಗೃತಿ ಬಗ್ಗೆ ಅರಿವು ಮೂಡಿಸಿದರು.

ಇನ್ನು ವಾಲ್ಮೀಕಿ ವೃತ್ತದಲ್ಲಿ ಮತದಾನ ಜಾಗೃತಿಗಾಗಿ ಚಿತ್ರಿಸಿದ ರಂಗೋಲಿ ಸ್ಪರ್ಧೆ ದಾರಿ ಹೋಕರನ್ನು ಕೈಬೀಸಿ ಕರೆಯುವಂತೆ ಚಿತ್ರಗಳು ಕಣ್ಮನ ಸೇಳೆಯುವಂತೆ ಸ್ಪರ್ಧೆ ನಡೆಸಲಾಗಿತ್ತು..

ಇದೇ ಸಂಧರ್ಭದಲ್ಲಿ ನಗರಸಭೆ ಕಂದಾಯ ಅಧಿಕಾರಿಗಳು, ಗಣೇಶ್, ಸಿಬ್ಬಂದಿ ಮಂಜುನಾಥ್, ಹಾಗೂ ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!