ಜಾಗನೂರಹಟ್ಟಿ ಗ್ರಾಮಸ್ಥರು ನೀರಿಗಾಗಿ ಆಹಾಕಾರ. ಹನಿ ನೀರಿಗಾಗಿ ಪರದಾಟ ರಾಷ್ಟ್ರೀಯ ಕಿಸಾನ್ ಸಂಘದ ಅಧ್ಯಕ್ಷ ಬಿ.ಟಿ. ಪ್ರಕಾಶ್
ನಾಯಕನಹಟ್ಟಿ::ಏ.16. ಜಾಗನೂರಹಟ್ಟಿ ಗ್ರಾಮಕ್ಕೆ ನೀರಿದ್ದರೂ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ ಎನ್ನುತ್ತಾರೆ ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕ ಅಧ್ಯಕ್ಷ ಬಿ.ಟಿ ಪ್ರಕಾಶ್ ಆರೋಪಿಸಿದ್ದಾರೆ.
ಮಂಗಳವಾರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ರಾಜ್ಯದಲ್ಲಿ ಅತಿ ಮಳೆ ಕಡಿಮೆ ಬೀಳುವ ಪ್ರದೇಶ ನಾಯಕನಹಟ್ಟಿ ಹೋಬಳಿ ಎಂಬ ಅಣೆಪಟ್ಟಿ ಕಟ್ಟಿಕೊಂಡಿರುವ ಹೋಬಳಿಯ ಇಲ್ಲಿನ ಜನರಿಗೆ ಕೊಳವೆಬಾವಿಗಳೇ ಆಸರೆಯಾಗಿವೆ.
ನಮ್ಮ ಜಾಗನೂರಹಟ್ಟಿ ಗ್ರಾಮ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಒಂದನೇ ಮತ್ತು ಎರಡನೇ ವಾರ್ಡಿನಲ್ಲಿ ಸುಮಾರು 350 ಮನೆಗಳು ಬರುತ್ತವೆ ಒಟ್ಟು ಜನಸಂಖ್ಯೆ 5000 ಹೊಂದಿರುವ ಜಾಗನೂರಹಟ್ಟಿ ಗ್ರಾಮಕ್ಕೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ.
ಗ್ರಾಮದಲ್ಲಿ ನೀರಿಗಾಗಿ ದಿನಗೂಲಿ ಕಾರ್ಮಿಕರು ಮಹಿಳೆಯರಿಗೆ
ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಉಂಟಾಗಿದೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಾಜಿ ಎಸ್ಡಿಎಂಸಿ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ,ಬಿ. ಶಿವರಾಜ್, ಜಿ. ಮಲ್ಲಿಕಾರ್ಜುನ್ ,ತಿಪ್ಪೇಸ್ವಾಮಿ, ಗೋಪಾಲಿ, ಕಾಂತ, ಗಾದ್ರಪ್ಪ, ಸುನಿಲ್, ರತ್ನಮ್ಮ, ಬೋರಮ್ಮ, ಜಮುನಮ್ಮ, ಸುರೇಶ್, ತಿಪ್ಪೇಶ್, ಸುರೇಶ್, ಇದ್ದರು