ಚಳ್ಳಕೆರೆ ನ್ಯೂಸ್ : ಯುಗ ಯುಗಾದಿ ಕಳೆದರೂ ಮರಳಿ ಬರುವುದು ಯುಗಾದಿ ಎಂಬ ಮಾತಿನಂತೆ ಪ್ರತಿ ವರ್ಷವೂ ಕೂಡ ಯುಗಾದಿ ಹಬ್ಬಕ್ಕೆ‌ ಸಂಭ್ರಮ ಮನೆ ಮಾಡಿರುತ್ತದೆ.

ಅದರಂತೆ ವಿಜ್ಞಾನ ನಗರಿ ಚಳ್ಳಕೆರೆಯಲ್ಲಿ ಈ ಹಬ್ಬದ ಎರಡನೇ ದಿನವಾದ ಚಂದ್ರನ ದಿನದಂದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಆಚರಣೆ ಮಾಡುವ ಮೂಲಕ ಹಬ್ಬದ ಕಳೆಗಟ್ಟುತ್ತಾರೆ.

ಅದರಂತೆ ವಿಜ್ಞಾನ ನಗರಗಳಲ್ಲಿ ಹಲವು ಪವಾಡಗಳು ನಡೆಯುತ್ತಾವೆ. ಅಂದರೆ ವಿಜ್ಞಾನ ಎಷ್ಟೆ ಮುಂದಿವರೆದರೂ ಹಿಂದಿನ ಕಾಲದ ಪವಾಡಗಳನ್ನು ಜೀವಂತವಾಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶ ಜನರು ಇಂತಹ ಹಬ್ಬದ ಸಂದರ್ಭದಲ್ಲಿ ಆಚರಣೆಗೆ ತರುತ್ತಾರೆ.

ಅದರಂತೆ ಚಳ್ಳಕೆರೆ ತಾಲೂಕಿನ ಬೋಂಬೆರಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ, ನಮ್ಮ ಕಲೆ ನಮ್ಮ ಸಂಸ್ಕೃತಿ, ಆಚಾರ ವಿಚಾರ ಪರಂಪರೆ ಬಿಂಬಿಸುವ ಮೋಡಿ ವೇಷದ ಚಿತ್ರಣವನ್ನು ಅನಾವರಣ ಗೊಳಿಸಿದ್ದಾರೆ.

ಪೆದ್ದಟ್ಟಿ ಗೊಲ್ಲರ ವೇಶ ಹಾಗೂ ಇತರೆ ಹಲವು ಪಾತ್ರಗಳಲ್ಲಿ ಗ್ರಾಮದ ಮುಖಂಡರು ‌ಯುವಕರು ವೇಶ ಧರಿಸುವ ಮೂಲಕ ಗ್ರಾಮದಲ್ಲಿ ಕ್ಷಣ ಕಾಲ ಹಬ್ಬದ ವಾತಾವರಣ ಮಡುಗಟ್ಟಿತ್ತು,

ರಂಗೋಲಿಯಲ್ಲಿ ಮೂಡಿದ ರಂಗಂ ಮನೆ ಸಾಟಲು ಹರಸಾಹಸ ಪಡುವ ಹಾಗು ಮನೆಯೊಳಗೆ ಬಿಡದೆ‌‌ ಕಾವಲು ಕಾಯುವ ಪೆದ್ದಗಳ ಕಾದಾಟ ನೋಡುಗರ ಕಣ್ಮನ ಸೆಳೆಯುತ್ತದೆ.

ಒಟ್ಟಾರೆ ಗ್ರಾಮೀಣ ಪ್ರದೇಶದ ಈ ಸೊಗಡು ಯುಗಾದಿ ಹಬ್ಬಕ್ಕೆ ‌ಕಳೆಗಟ್ಟಿದ್ದು‌ ಮರೆಯುವಂತಿಲ್ಲ

Namma Challakere Local News
error: Content is protected !!