ಚಳ್ಳಕೆರೆ : ಈಡೀ ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ ಕನಸು ಕಂಡವರಲ್ಲಿ ಮೊದಲಿಗ ನಾನು ಅಂದು ಬರಡಾಗಿದ್ದ ಬಿಜಾಪುರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಲ್ಲಾ ಕೆರೆಗಳನ್ನು ತುಂಬಿಸುವ ಮೂಲಕ ಕನಸು ಸಾಕರ ಮಾಡಿದ್ದೆನೆ ಅದರಂತೆ ಈ ಬಯಲು ಸೀಮೆ ಚಿತ್ರದುರ್ಗದಲ್ಲಿ ಕೂಡ ಕೆರೆತುಂಬಿಸುವ ಯೋಜನೆ ಮಾಡಲಾಗುವುದು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಹೇಳಿದ್ದಾರೆ.
ಅವರು ನಗರದ ಬೆಂಗಳೂರು ರಸ್ತೆಯ ವಾಲ್ಮಿಕಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಕುಡಿಯಲು ನೀರು ಇಲ್ಲದೆ ಇರುವುದು ಚಿತ್ರದುರ್ಗ ಜಿಲ್ಲೆ, ಮಧ್ಯ ಕರ್ನಾಟಕ ಭಾಗದ ಈ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಕನಸು ಇದೆ, ಆದರೆ ನಾನು ಮೊದಲಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮೆಡಿಕಲ್ ಕಾಲೇಜು ಮಾಡಿದ್ದೆ, ಆದ್ದರಿಂದ ಈ ಬಾರಿ ಮತದಾರರು ಬಿಜೆಪಿಗೆ ಮತ ನೀಡಿದರೆ ಚಿತ್ರದುರ್ಗ ಜಿಲ್ಲೆಗೆ ನೀರಾವರಿ ಸೌಲಭ್ಯ ತರುತ್ತೆನೆ, ಇನ್ನೂ ಇಂಡಿಯಾನ್ ಏಪೋರ್ಟ್ ಮಾಡಿಸುವ ಕನಸು ಇದೆ, ಪ್ರವಾಸಿತಾಣ ಮಾಡಲು ಪಣ ತೊಟ್ಟಿರುವೆ, ಗುಳೆ ಹೊಗುವ ಜನರಿಗೆ ಉದ್ಯಾಮ ಶೀಲತೆಯಲ್ಲಿ ಉದ್ಯೋಗ ಸೃಷ್ಠಿಸಲಾಗುವುದು, ಇನ್ನೂ ಭದ್ರಾ ಯೋಜನೆಗೆ ಸು.5300 ಕೋಟಿ ರೂಪಾಯಿ ವ್ಯಯಿಸಲಾಗುತ್ತದೆ, ಈಡೀ ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ ಕನಸು ಕಂಡವರಲ್ಲಿ ಮೊದಲಿಗ ನಾನು, ಅದರಂತೆ ಈ ಬಯಲು ಸೀಮೆ ಚಿತ್ರದುರ್ಗದಲ್ಲಿ ಕೂಡ ಕೆರೆ ತುಂಬಿಸುವ ಯೋಜನೆ ಮಾಡಲಾಗುದು, ದೇಶದಲ್ಲಿ ಮೊತ್ತೊಮ್ಮೆ ಬಿಜೆಪಿ ಸರಕಾರ ಬರುತ್ತದೆ, ಮೋದಿ ಇರುತ್ತಾರೆ, ಚಿತ್ರದುರ್ಗ ಜಿಲ್ಲೆ ಅಭಿವೃದ್ದಿಗೆ ಯೋಗ್ಯವಾದ ಜಿಲ್ಲೆ ಆದರೆ ಇಲ್ಲಿ ಸಮಸ್ಯೆಗಳು ತುಂಬಾ ಇವೆ, ಪಕ್ಕದ ಹಾಸನ, ಶಿವಮೊಗ್ಗ ಜಿಲ್ಲೆಗಳು ಅಭಿವೃದ್ದಿಯಾಗಿವೆ, ಆದರೆ ಚಿತ್ರದುರ್ಗ ಹಾಗೆ ಇದೆ ಆದ್ದರಿಂದ ಈ ಬಾರಿ ಬಿಜೆಪಿಗೆ ಮತ ನೀಡಿ ಅಭಿವೃದ್ದಿ ಕಾಣಿ ಎಂದರು.
ಇದೇ ಸಂಧರ್ಭದಲ್ಲಿ ಮಾಜಿ ಶಾಸಕ ಜಿಎಚ್.ತಿಪ್ಪಾರೆಡ್ಡಿ, ಚಳ್ಳಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಮುರುಳಿ, ಮಾತನಾಡಿದರು.
ಇದೇ ಸಭೆಯಲ್ಲಿ ಮಾಜಿ ಶಾಸಕ ಬಸವರಾಜ್ ಮಂಡಿಮಠ್, ಬಾಳೆಕಾಯಿ ರಾಮದಾಸ್, ಜೈ ಪಾಲಯ್ಯ, ಅನಿಲ್ ಕುಮಾರ್, ಎಂ.ರವೀಶ್ ಕುಮಾರ್, ಸೋಮಶೇಖರ್ ಮಂಡಿಮAಟ್, ಜೈರಾಮ್, ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಶ್ರೀನಿವಾಸ್, ಪ್ರಮೋದ್, ಕಾಲುವೆಳ್ಳಿ ಪಾಲಯ್ಯ, ಮಾತೃಶ್ರೀ ಮಂಜುನಾಥ್, ಎವಿಬಿಪಿ.ಮಂಜುನಾಥ್,