ಚಳ್ಳಕೆರೆ : ನಿನ್ನೆ ಗಾಳಿ ಸಹಿತ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ
ಆದೇ ರೀತಿಯಲ್ಲಿ ಕೂಡ ಮೊಳಕಾಲ್ಮೂರು ತಾಲೂಕಿನ ಮೇಗಳಹಟ್ಟಿ ಗ್ರಾಮದ ಮಾರಕ್ಕ ಹಾಗೂ ಅವರ ಮಗನಾದ ವೆಂಕಟೇಶ ಇಬ್ಬರಿಗೆ ಸಿಡಿಲು ಹೊಡೆದು ಸಾವನ್ನಪ್ಪಿದ್ದು ಗ್ರಾಮದಲ್ಲಿ ದುಖಃ ಮಡುಗಟ್ಟಿದೆ.
ಗ್ರಾಮದಲ್ಲಿ ನಿರಾವ ಮೌನ… ಮನೆ ಮಾಡಿದೆ ಇನ್ನೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ,
ಇದರಂತೆ ಕುಟುಂಬಕ್ಕೆ ಸ್ವಾಂತನ ಹೇಳಲು ಮೊಳಕಾಲ್ಮೂರು ವಿಧಾನ ಸಭಾಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು ಮೃತಪಟ್ಟ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ವೈಯುಕ್ತಿಕವಾಗಿ ಧನ ಸಹಾಯ ಮಾಡಿ ಮುಂದಿನ ಕಾರ್ಯಕ್ಕೆ ಅನುವು ಮಾಡಿಕೊಟ್ಟಿದ್ದಾರೆ.