ಚಿತ್ರದುರ್ಗ : 2024 ರ ಲೋಕಸಭಾ ಟಿಕೆಟ್ ಆಕಾಂಕ್ಷಿ ಯಾಗಿದ್ದ ರಘುಚಂದನ್ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದ್ದು ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಬಿಜೆಪಿ ಆಕಾಂಕ್ಷಿಗೆ ಟಿಕೇಟ್ ತಪ್ಪಿದ್ದಕ್ಕಾಗಿ
ತಂದೆ ಮಗ ಇಬ್ಬರು ಬಿಜೆಪಿ ವರಿಷ್ಠರ ವಿರುದ್ಧ ಅಕ್ರೋಶ ವ್ಯಕ್ತಪಡಿಸುವ
ಮೂಲಕ ಬಂಡಾಯ ಎದ್ದಿದ್ದಾರೆ.
ಚಿತ್ರದುರ್ಗ ಲೋಕಸಭೆ ಚುನಾವಣೆಗೆ ಈಗಾಗಲೇ ಹಲವು ನಾಯಕರಿಗೆ
ಬಿಜೆಪಿ ಟಿಕೆಟ್ ಕಟ್ ಮಾಡಿದ್ದು ಇದೀಗ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ
ಶಾಸಕ ಎಂ ಚಂದ್ರಪ್ಪ ಅವರ ಪುತ್ರರಘು ಚಂದ್ರನ ಟಿಕೆಟ್
ಆಕಾಂಕ್ಷಿಯಾಗಿದ್ದರು ಈಗಾಗಲೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಪಕ್ಷದ
ಕಾರ್ಯಕರ್ತರೊಂದಿಗೆ ಸಭೆಯೂ ನಡೆಸಿದ್ದರು ಆದರೆ ಸ್ಥಳೀಯರಿಗೆ
ಟಿಕೇಟ್ ನೀಡದೆ 500 ಕಿ.ಮೀ ದೂರದ ಗೋವಿಂದ ಕಾರಜೋಳ್
ಅವರಿಗೆ ಬಿಜೆಪಿ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಇದೀಗ ಹೊಳಲ್ಕೆರೆ
ಬಿಜೆಪಿಶಾಸಕ ಚಂದ್ರಪ್ಪ ಇವರ ಮಗ ರಘು ಚಂದ್ರನ್ ಟಿಕೇಟ್ ನೀಡದೆ
ಇರುವುದರಿಂದ ಈಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು
ಶಾಸಕ ಎಂ ಚಂದ್ರಪ್ಪ ಬಿಜೆಪಿ ಬಂಡಾಯ ಅಭ್ಯಾರ್ಥಿಯಾಗಿ
ಕಣಕ್ಕಿಳಲಿದ್ದಾರೆ.
ಚಿತ್ರದುರ್ಗದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ
ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರು, ಬಿಜೆಪಿ ಟಿಕೆಟ್ ಬದಲಿಸಿದರೆ
ಪುತ್ರರಘು ಚಂದನ್ ಪಕ್ಷೇತರ ಸ್ಪರ್ಧೆಸುತ್ತಾರೆ ಎಂದು ಚಿತ್ರದುರ್ಗದಲ್ಲಿ
ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ಹೇಳಿಕೆ ನೀಡಿದರು.
ಏಪ್ರಿಲ್ 3
ರಂದು ರಘು ಚಂದನ್ ನಾಮಪತ್ರ ಸಲ್ಲಿಕೆಗೆ ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ.