ಚಳ್ಳಕೆರೆ ನ್ಯೂಸ್ : ಭಾರತದ ಮೊದಲ
ಸ್ವದೇಶಿ ಬಾಹ್ಯಾಕಾಶ ನೌಕೆ ಎಂದು
ಕರೆಯಲಾಗುವ ‘ಪುಷ್ಪಕ್ ‘ ಮರು
ಬಳಕೆಯ ವಾಹಕ (ಆರ್‌ಎಲ್‌ವಿ)
ಅನ್ನು ಶುಕ್ರವಾರ ಬೆಳಗ್ಗೆ 7 ಗಂಟೆಗೆ
ಕರ್ನಾಟಕದ ಚಳ್ಳಕರೆಯಲ್ಲಿರುವ
ರಕ್ಷಣಾ ಇಲಾಖೆಯ ರನ್‌ನಲ್ಲಿ
ಪ್ರಯೋಗಕ್ಕೆ ಒಳಪಡಿಸಲಾಗಿದೆ.

ಭವಿಷ್ಯದಲ್ಲಿ ಉಪಗ್ರಹಗಳನ್ನು
ನಿಗದಿತ ಕಕ್ಷೆಗೆ ಸೇರಿಸಿ ಅಲ್ಲಿಂದ
ಭೂಮಿಗೆ ಮರಳಲು ಈ ಪುಷ್ಪಕ್
ರಾಕೆಟ್ ಅಥವಾ ಸ್ಪೇಸ್‌ಶಿಪ್ ಅನ್ನು
ಬಳಕೆ ಮಾಡಲು ಇಸ್ರೋ
ಉದ್ದೇಶಿಸಿದೆ.

ಇದರ ಭಾಗವಾಗಿ ಈಗಾಗಲೇ 2
ಬಾರಿ ಚಳ್ಳಕೆರೆಯ ರನ್‌ವೇನಲ್ಲಿ ಈ
ಸ್ಪೇಸ್‌ಶಿಪ್‌ಮಾದರಿಯಪ್ರಾಯೋಗಿಕ
ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಇದೇ ರಾಕೆಟ್‌ನ ಸ್ವಯಂ
ಸುರಕ್ಷಿತ ಲ್ಯಾಂಡಿಂಗ್ ಮಾಡುವ
ವ್ಯವಸ್ಥೆಯನ್ನು ಕಳೆದ ವರ್ಷದ
ಏ.2ರಂದು ಯಶಸ್ವಿಯಾಗಿ
ಪ್ರಯೋಗ ಮಾಡಲಾಗಿತ್ತು.

ಅದರ
ಮುಂದುವರೆದ ಭಾಗವಾಗಿ ಇನ್ನಷ್ಟು
ಉಪಕರಣ ಮತ್ತು ವ್ಯವಸ್ಥೆಗಳ ಪರೀಕ್ಷೆ ಗಾಗಿ ಶುಕ್ರವಾರ ಇನ್ನೊಂದು ಸುತ್ತಿನ
ಪ್ರಯೋಗಕ್ಕೆ ಇಸ್ರೋ ಸಜ್ಜಾಗಿತ್ತು.
ಈ ಸ್ಪೇಸ್‌ಶಿಪ್ ನಿಜ ರೂಪ ಪಡೆದು
ಕೊಂಡು ಉಡ್ಡಯನ ಆರಂಭಿಸಿದರೆ
ಇಸ್ರೋದ ಉಪಗ್ರಹ ಉಡ್ಡಯನ
ಪ್ರಮಾಣದಲ್ಲಿ
ವೆಚ್ಚ ಭಾರೀ
ಇಳಿಯಲಿದೆ ಎನ್ನಲಾಗಿದೆ.

Namma Challakere Local News
error: Content is protected !!