ಚಳ್ಳಕೆರೆ ನ್ಯೂಸ್ :
ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಚಾಲಕ ಸಾವು
ಚಳ್ಳಕೆರೆ
ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಮಣ್ಣು ತುಂಬಿಕೊಂಡು
ಹೋಗುವ ವೇಳೆ ಟ್ರ್ಯಾಕ್ಟರ್ ಚಲಿಸಿ ಚಾಲಕ ಸಾವನಪ್ಪಿದ
ಘಟನೆ ನಡೆದಿದೆ.
ಚಾಲಕ ಆರ್. ನಾಗೇಶ್ (26) ಮೃತಪಟ್ಟ
ಯುವಕನಾಗಿದ್ದು, ತನ್ನ ಟ್ರ್ಯಾಕ್ಟರ್ ಚಲಿಸುತ್ತಿರುವುದನ್ನು ಕಂಡು
ಅದನ್ನು ತಡೆಯಲು ಹೋದಾಗ ಆಯಾ ತಪ್ಪಿ ಟ್ರ್ಯಾಕ್ಟರ್ ಚಕ್ರಕ್ಕೆ
ಸಿಲುಕಿ ಸಾವನ್ನಪ್ಪಿದ್ದಾನೆ.
ಘಟನೆ ಸ್ಥಳಕ್ಕೆ ಠಾಣಾ ಇಸ್ಪೆಕ್ಟರ್
ಕೆ. ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಾಲಕನ
ಅಜಾಗರೂಕತೆಯಿಂದ ಈ ಘಟನೆ ನಡೆದಿದ್ದು, ಪೊಲೀಸರು
ಪ್ರಕರಣ ದಾಖಲಿಸಿಕೊಂಡಿದ್ದಾರೆ.