ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆ ಈಗಾಗಲೇ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದೆ ಅದರಂತೆ ಈಡೀ ರಾಜ್ಯದ ಉದ್ದಗಲಕ್ಕೂ ಚೆಕ್ ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ಕಾರ್ಯ ನಡೆಯುತ್ತಿದೆ.
ಅದರಂತೆ ಚಳ್ಳಕೆರೆ ತಾಲೂಕಿನಲ್ಲಿ ಡಿವೈಎಸ್ ಪಿ ಬಿ.ಟಿ.ರಾಜಣ್ಣ ನೇತೃತ್ವದ ತಂಡ ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ರಸ್ತೆಯಲ್ಲಿ ವಾಹನ ತಪಾಸಣೆ ಕಾರ್ಯನಡೆಸುತ್ತಿದ್ದಾರೆ.
ಅದರಂತೆ ಇಂದು ಚಿತ್ರದುರ್ಗ ಮಾರ್ಗದ ರಸ್ತೆಯಲ್ಲಿ ವಾಹನಗಳನ್ನು ಡಿವೈಎಸ್ ಪಿ ಬಿಟಿ.ರಾಜಣ್ಣ ಕುದ್ದಾಗಿ ತಾವೇ ತಪಾಸಣೆ ಮಾಡುವುದು ಕಂಡು ಬಂದಿತ್ತು.
ಚುನಾವಣೆಯಲ್ಲಿ ಅಕ್ರಮ ಹಣ, ಹಾಗೂ ಇನ್ನಿತರೆ ವಸ್ತುಗಳ ಸಾಗಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.