ಚಳ್ಳಕೆರೆ:
ನಗರದ ಕಿರಾಣಿ ಅಂಗಡಿ ಮಂಡಿ ಬಂಗಾರ ವರ್ತಕರು ಬಟ್ಟೆ ವರ್ತಕರು ಬಾರ್ ಅಂಡ್ ರೆಸ್ಟೋರೆಂಟ್ ಪ್ರಿಂಟಿಂಗ್ ಪ್ರೆಸ್ ಲಾಡ್ಜ್ ಹಾಗೂ ಕಲ್ಯಾಣ ಮಂಟಪ ಸೇರಿದಂತೆ ಎಲ್ಲಾ ವರ್ತಕರು ದೊಡ್ಡಮಟ್ಟದ ಹಣ ಸಂದಾಯ ಮಾಡಬೇಕೆಂದರೆ ತಾಲೂಕಿನ ಚುನಾವಣಾ ಅಧಿಕಾರಿಯ ಪರ್ಮಿಷನ್ ತೆಗೆದುಕೊಂಡು ವ್ಯವಹರಿಸಿ ಎಂದು ಸಹಾಯಕ ಚುನಾವಣಾ ಅಧಿಕಾರಿ ಆನಂದ್ ಹೇಳಿದರು_
ಇವರು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿರುವ ಚುನಾವಣೆ ಹಾಗೂ ನೀತಿ ಸಂಹಿತೆ ಆದರಿಸಿ ವರ್ತಕರಿಗೆ ನೀತಿ ಸಂಹಿತೆಯ ಕಾನೂನು ಸಲಹೆ ಹೇಳಿ ಮಾತನಾಡಿದ ಇವರು,
ವಿಧಾನಸಭೆ ಚುನಾವಣೆಯಾಗಲಿ ಲೋಕಸಭೆ ಚುನಾವಣೆಯಾಗಲಿ ನೀತಿ ಸಂಹಿತೆ ಎನ್ನುವುದು ಕಾನೂನಿನ ಒಂದು ಭಾಗವಾಗಿದ್ದು,
ತಾಲೂಕಿನ ಎಲ್ಲಾ ವರ್ತಕರು ಅನುಕರಿಸಬೇಕು ನಗರದ ಸುತ್ತಮುತ್ತಲು ಚೆಕ್ಪೋಸ್ಟ್ಗಳನ್ನು ನಮ್ಮ ಪೊಲೀಸ್ ಸಿಬ್ಬಂದಿಗಳು ಸಿಸಿ ಕ್ಯಾಮೆರಾ ದೊಂದಿಗೆ ಕುಳಿತಿರುತ್ತಾರೆ,
ಹೋಗಿ ಬರುವ ವಾಹನಗಳನ್ನು ಪರಿಶೀಲನೆ ಮಾಡುತ್ತಾರೆ ಈ ಹಿನ್ನಲೆಯಲ್ಲಿ ನಗರದ ಪ್ರತಿಯೊಬ್ಬ ವರ್ತಕರು ನೀವು ತೆಗೆದುಕೊಂಡು ಹೋಗುವ ಹಣವನ್ನು ಬ್ಯಾಂಕಿನ ಮೂಲಕ ಹಣ ಪಡೆದು ಚುನಾವಣಾ ಅಧಿಕಾರಿಗಳಿಗೆ ಹಣವನ್ನು ತೋರಿಸಿ ಪರ್ಮಿಷನ್ ಲೆಟರ್ ಗಳನ್ನು ಪಡೆದು ಅಧಿಕಾರಿಗಳು ಪರ್ಮಿಷನ್ ಲೆಟರ್ ಕೊಡುತ್ತಾರೆ ನೀವು ರಾಜ್ಯಾದ್ಯಂತ ದೊಡ್ಡ ಮಟ್ಟದ ವ್ಯವಹಾರವನ್ನು ಮಾಡಬಹುದು,
ಹಾಗೂ ಪ್ರಿಂಟಿಂಗ್ ಪ್ರೆಸ್ ಮಾಲೀಕರು ರಾಜಕಾರಣಿಗಳು ಎಷ್ಟು ಪ್ರತಿಗಳನ್ನು ಪ್ರಿಂಟ್ ಮಾಡಿಸುತ್ತಾರೆ ಆ ಪ್ರತಿಗಳ ಕೆಳಗೆ ನಂಬರ್ ಹಾಕುವುದು ಕಡ್ಡಾಯವಾಗಿರುತ್ತದೆ
ಇದು ಅಲ್ಲದೆ ಒಬ್ಬ ಮನುಷ್ಯನಿಗೆ ನೀತಿ ಸಂಹಿತೆಯ ಕಾನೂನಿನ ಪ್ರಕಾರ 50,000ಗಳನ್ನು ತೆಗೆದುಕೊಂಡು ಹೋಗುವ ಪರ್ಮಿಷನ್ ಇರುತ್ತದೆ, ಇದನ್ನು ಬಿಟ್ಟು ನೀವೇನಾದರೂ ಹೆಚ್ಚಿನ ಮಟ್ಟದಲ್ಲಿ ಪರ್ಮಿಷನ್ ಇಲ್ಲದೆ ಹಣ ತೆಗೆದುಕೊಂಡು ಹೋದರೆ ನಿಮ್ಮ ಹಣವನ್ನು ಸಿಜ್ ಮಾಡುವುದಲ್ಲದೆ ಕೋರ್ಟ್ ಮೆಟ್ಟಿಲು ಹತ್ತಬೇಕಾಗುತ್ತದೆ ಈ ಎಲ್ಲಾ ಅಂಶಗಳನ್ನು ನಗರದ ವರ್ತಕರು ಕಾನೂನು ನಿಯಮಗಳನ್ನು ಪಾಲಿಸಿದರೆ ಮಾತ್ರ ಬಚವಾಗಲು ಸಾಧ್ಯ
ಇನ್ನು ಈ ವೇಳೆ ಕಾನೂನು ರೀತಿಯ ಸಲ ಹೇಳಿದ ತಾಲೂಕು ದಂಡಾಧಿಕಾರಿ ರೆಹಾನ್ ಪಾಷಾ ,ಅಬಕಾರಿ ಉಪನಿರೀಕ್ಷಕರು ನಾಗರಾಜ್, ಇವರು ನೀತಿ ಸಮಿತಿಯ ನಿಯಮಗಳನ್ನು ಪಾಲಿಸುವಂತೆ ಹೇಳಿದರು,
ಇನ್ನು ಈ ಸಂದರ್ಭದಲ್ಲಿ ವರ್ತಕರ ಪರವಾಗಿ ಆರು ಪ್ರಸನ್ನ ಕುಮಾರ್ ಮಾತನಾಡಿದರು,
ಇನ್ನು ಈ ಸಭಾಂಗಣದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಬಾರ್ ಅಂಡ್ ರೆಸ್ಟೋರೆಂಟ್ ವರ್ತಕರು, ಚಿನ್ನ ಬೆಳ್ಳಿ ವರ್ತಕರು ಬಟ್ಟೆ ವ್ಯಾಪಾರಸ್ಥರು ಪ್ರಿಂಟಿಂಗ್ ಪ್ರೆಸ್ ಮಾಲೀಕರು ಸೇರಿದಂತೆ ಅನೇಕ ವರ್ತಕರು ಹಾಜರಿದ್ದರು