ಚಳ್ಳಕೆರೆ ನ್ಯೂಸ್ : ಕುಡಿಯುವ ನೀರಿಗೆ ಎಲ್ಲೆಡೆ ಹಾಹಾಕಾರ,
ಬೆಂಗಳೂರು ಮಹಾನಗರ ಸೇರೆದಂತೆ ಈಡೀ ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಆದರೆ ಇನ್ನೂ ಬಯಲು ಸೀಮೆ ಚಳ್ಳಕೆರೆಯಲ್ಲಂತು ಕುಡಿಯುವ ನೀರಿನ ಬವಣಿ ಪ್ರತಿ ವರ್ಷ ತಪ್ಪಿದ್ದಲ್ಲ.
ವಾಣಿವಿಲಾಸ ಸಾಗರದ ನೀರು ಬಂದು ನಗರದಲ್ಲಿ ಕೊಂಚ ನೀರಿನ ಸಮಸ್ಯೆ ತಿಳಿಯಾಗಿದೆ.
ಆದರೆ ಕುಡಿಯುವ ನೀರು ಪೋಲ್ ಹಾಗದಂತೆ ನೋಡಿಕೊಳ್ಳಬೇಕಾದ ನಗರಸಭೆ ಇಲಾಖೆ ಮಾತ್ರ ಕೊಂಚ ನಿರ್ಲಕ್ಷ್ಯ ವಹಿಸಿದಂತೆ ಕಾಣುತ್ತಿದೆ.
ಹೌದು ಚಳ್ಳಕೆರೆ, ವಾಲ್ಮೀಕಿ ನಗರದ ಪಂಪ್ ಹೌಸ್ ಹಿಂಬಾಗ ಕುಡಿಯುವ ನೀರಿನ ಪೈಪ್ ಹೊಡೆದು ಹಲವು ದಿನಗಳೆ ಕಳೆದಿವೆ ಆದರೆ ಪೈಪ್ ಸರಿಪಡಿಸಬೇಕಾದವರು ಇದುವರೆಗೆ ಬಾರದೆ ಇರುವ ಕಾರಣ ಕುಡಿಯುವ ನೀರು ಚರಂಡಿ ಮೋರಿಗೆ ಹರಿಯುತ್ತಿವೆ.
ಇನ್ನದಾರೂ ಸಂಬಂಧಿಸಿದ ನಗರಸಭೆ ಅಧಿಕಾರಿಗಳು ಕುಡಿಯುವ ನೀರಿನ ಪೈಪ್ ಸರಿಪಡಿಸಿ ಸಾರ್ವಜನಿಕರಿಗೆ ಕುಡಿಯುವ ನೀರು ಕೊಡುವವರೋ ಕಾದುನೋಡಬೇಕಿದೆ.