ಚಳ್ಳಕೆರೆ ನ್ಯೂಸ್ :ಮಾರ್ಚ 11ರ ಸೋಮವಾರ ದೇವಿಗೆ ಗಂಗಾಪೂಜೆಯನAತರ ಶ್ರೀವೀರಭದ್ರಸ್ವಾಮಿಯ ವೀರಗಾಸ್ಯೆ, ಪುರಂತರ ವೀರನಾಟ್ಯ, ಇರುತ್ತದೆ, ನಂತರ ಮಾ.12ರ ಮಂಗಳವಾರ ಬಲ ಕಳಶ, ಉಡಿ ತುಂಬುವುದು, ಮಾಂಗಲ್ಯಧಾರಣೆ, ನಂತರ ಸಂಜೆ 5.ಗಂಟೆಗೆ ಕೋಣನ ಉತ್ಸವ, ಇರುತ್ತದೆ, ಇನ್ನೂ ಮಾ.13ರ ಬುಧವಾರ ಹಿಟ್ಟಿನಾರತಿ, ಬೇವಿನ ಸೀರೆ, ಉತ್ಸವ, ಮನರಂಜನಾ ಕಾರ್ಯಕ್ರಮಗಳು ನಡೆಯುತ್ತವೆ, ಇನ್ನೂ ಮಾ.14ರ ಗುರುವಾರ ಮಧ್ಯಾಹ್ನ 3.ಗಂಟೆಗೆ ಮುಕ್ತಿ ಬಾವುಟ ಹರಾಜು ನಂತರ ಸಿಡಿ ಉತ್ಸವ, ಪೋತರಾಜರ ವೀರನಾಟ್ಯ, ಕೀಲು ಕುದುರೆ, ಮರಗಾಲು ನೃತ್ಯ, ವಾಧ್ಯಗೋಷ್ಠಿಗಳು ನಡೆಯುತ್ತಾವೆ.ಮಾ.15ರ ಶುಕ್ರವಾರ ಮಧ್ಯಾಹ್ನ 3.ಗಂಟೆಗೆ ಗಾವುಸಭೆ, ಪೋತರಾಜರ ವೀರನಾಟ್ಯ ನಡೆಯುತ್ತದೆ, ಕೊನೆಯ ದಿನವಾದ ಮಾ.16ರ ಶನಿವಾರ ಸಂಜೆ 6ಕ್ಕೆ ಓಕಳಿ ಹಾಗೂ ಚಳ್ಳಕೆರೆಯಮ್ಮ, ಶ್ರೀ ಉಡಸಲಮ್ಮನವರ ಹಾಗೂ ವೀರಭದ್ರಸ್ವಾಮಿ ಉತ್ಸವ ವೀನಾಟ್ಯದೊಂದಿಗೆ ಜಾತ್ರೆಗೆ ತೆರೆ ಬಿಳಲಾಗುವುದು.