ನಾಯಕನಹಟ್ಟಿ:-ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪ್ರತಿಯೊಬ್ಬ ರೈತರಿಗೆ ಕಲ್ಪಿಸಲಾಗುವುದು ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ.
ಬುಧವಾರ ಹೋಬಳಿಯ ಎನ್ ಮಹದೇವಪುರ ಗ್ರಾಮದ ರೈತರ ಜಮೀನಿನಲ್ಲಿ ತಳಕು ಉಪವಿಭಾಗ ಹಿರಿಯೂರು ವಿಭಾಗ ಅಕ್ರಮ ಸಕ್ರಮ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದಲ್ಲಿ ತುಂಬಾ ಹಿಂದುಳಿದ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಮೊಳಕಾಲ್ಮೂರು ಕ್ಷೇತ್ರ ಈ ಕ್ಷೇತ್ರದ ಜನತೆ ನೀರಾವರಿಯನ್ನ ಅವಲಂಬಸಿ ಜೀವನ ನಡೆಸುತ್ತಿದ್ದು ತಳಕು ಮತ್ತು ನಾಯಕನಹಟ್ಟಿ ಹೋಬಳಿ ರೈತರ ಬೆಸ್ಕಾಂ ಇಲಾಖೆಗೆ ಅಕ್ರಮ ಸಕ್ರಮ ಯೋಜನೆ ಅಡಿ ಸುಮಾರು 690.ಅರ್ಜಿಗಳನ್ನು ಸಲ್ಲಿಸಿದ್ದು ಇದರಲ್ಲಿ 260 ಅರ್ಜಿಗಳಿಗೆ ಈಗಾಗಲೇ ವಿದ್ಯುತ್ವಾಗಿ ಚಾಲನೆಯನ್ನು ನೀಡಲಾಗಿದೆ ಏಪ್ರಿಲ್ ಒಂದರಿಂದ ಇನ್ನುಳಿದಂತಹ ಎಲ್ಲಾ ರೈತರಿಗೆ ಅಕ್ರಮ ಸಕ್ರಮ ಯೋಜನೆ ಅಡಿ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದಾಗಿ ಭರವಸೆಯನ್ನು ನೀಡಿದರು.
ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ತಿಪ್ಪೇಸ್ವಾಮಿ, ಬಗರ್ ಹುಕುಂ ಕಮಿಟಿ ಸದಸ್ಯ ಪಿ ಜಿ ಬೋರನಾಯಕ, ಹಿರಿಯೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ ರಾಮಚಂದ್ರ ಸುತಾರ್, ಮೊಳಕಾಲ್ಮೂರು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್, ತಳಕು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಮತಾ ಎಂ ಜಿ,ನಾಯಕನಹಟ್ಟಿ ಇಲಾಖೆಯ ಶಾಖಾಧಿಕಾರಿ ಎನ್ ಬಿ ಬೋರಣ್ಣ. ಬೆಸ್ಕಾಂ ಸಿಬ್ಬಂದಿಗಳು ಎನ್ ಮಹದೇವಪುರ ಗ್ರಾಮಸ್ಥರು ಇದ್ದರು