ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹುಂಡಿಯಲ್ಲಿ ₹38.67660 ಲಕ್ಷ ಸಂಗ್ರಹ
ನಾಯಕನಹಟ್ಟಿ:: ಐತಿಹಾಸಿಕ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಗಳಲ್ಲಿ ಕಾಣಿಕೆ ಹುಂಡಿ ಹಣದ ಎಣಿಕೆ ಕಾರ್ಯವನ್ನು ಮಂಗಳವಾರ ದೇವಾಲಯದ ಆವರಣದಲ್ಲಿ ಕಂದಾಯ ಇಲಾಖೆ ಮತ್ತು ಬ್ಯಾಂಕ್ ಅಧಿಕಾರಿಗಳ ಸಹಯೋಗದಲ್ಲಿ ನಡೆಸಲಾಯಿತು.
ಮೊದಲು ಹೊರಮಠ ದೇವಾಲಯದಲ್ಲಿ ಮುಜರಾಯಿ ಹಾಗೂ ಕಂದಾಯ ಇಲಾಖೆಯ ಶಿರಸ್ತೇದಾರ್ ಹಾಗೂ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಬೆಳಗ್ಗೆ 10ಕ್ಕೆ ಆರಂಭವಾದ ಎಣಿಕೆ ಕಾರ್ಯ 12 ಗಂಟೆಗೆ ಮುಕ್ತಾಯವಾಯಿತು.
ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ 4:30ಕ್ಕೆ ಗಂಟೆಗೆ ಮುಕ್ತಾಯವಾಯಿತು.
ಹೊರಮಠದಲ್ಲಿ₹600595. ಒಳಮಠ ₹3267065. ಹುಂಡಿಯಲ್ಲಿ ₹ ಲಕ್ಷ ಸಂಗ್ರಹವಾಗಿದೆ ಒಟ್ಟಾರೆಯಾಗಿ. 5 ತಿಂಗಳ ಅವಧಿಯಲ್ಲಿ₹ 38.67660 ಲಕ್ಷ ಹಣ ಸಂಗ್ರಹವಾಗಿದೆ ಹಣವನ್ನು ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು.
ಇನ್ನೂ ಇದೇ ವೇಳೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಣಾಧಿಕಾರಿ ಎಚ್. ಗಂಗಾಧರಪ್ಪ ಮಾತನಾಡಿ ಮಾನ್ಯ ಜಿಲ್ಲಾಧಿಕಾರಿ ಹಾಗೂ ಚಳ್ಳಕೆರೆ ತಾಶಿಲ್ದಾರ್ ಅವರ ಆದೇಶದ ಮೇರೆಗೆ ಮಾರ್ಚ್ 26ರಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಸಹ ಹುಂಡಿ ಎಣಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಉಂಡಿ ಇಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮ ಸಹಾಯಕರು ಕೆನರಾ ಬ್ಯಾಂಕ್ ಸಿಬ್ಬಂದಿಗಳು ಭಾಗವಹಿಸಿದ್ದಾರೆ. ಹೊರಮಠ ಮತ್ತು ಒಳಮಠ ಹುಂಡಿಯಲ್ಲಿ ಇದ್ದ ಹಣವನ್ನು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಶ್ರೀ ಗುರು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಹಣವನ್ನು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಜಾತ್ರೆಗೆ ಬಳಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಎಂ.ಎಂ. ಸದಾಶಿವಪ್ಪ, ನಾಡಕಚೇರಿ ಉಪತಾಶಿಲ್ದಾರ್ ಬಿ ಶಕುಂತಲಾ, ರಾಜಸ್ವ ನಿರೀಕ್ಷಕ ಚೇತನ್ ಕುಮಾರ್, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿಗಳಾದ ಎಸ್ ಸತೀಶ್, ಮನು, ಗ್ರಾಮ ಲೆಕ್ಕಾಧಿಕಾರಿಗಳಾದ ಜಗದೀಶ್, ಶಂಕರ್, ಜಯರಾಮ್, ಶರಣಬಸಪ್ಪ, ರವಿಕುಮಾರ್, ಪ್ರದೀಪ, ಪುಷ್ಪಲತಾ ,ಎಲ್ ಉಮಾ, ಶಶಿಕಲಾ, ಕೆನರಾ ಬ್ಯಾಂಕ್ ಸಿಬ್ಬಂದಿಗಳಾದ ಸತ್ಯನಾರಾಯಣ, ವಿರೂಪಾಕ್ಷಿ, ಚೇತನ, ರಘು,ನಲಗೇತನಹಟ್ಟಿ ಎಂ ಬಿ.ಮಹಾಸ್ವಾಮಿ,ಕೆ .ಬಿ. ಪುರಂದರ, ಗ್ರಾಮ ಸಹಾಯಕರಾದ ಚನ್ನಬಸಪ್ಪ, ಓಬಣ್ಣ, ಹರೀಶ್, ಕುಮಾರ್, ತಿಪ್ಪೇಸ್ವಾಮಿ, ಹೇಮಂತ್, ಸೇರಿದಂತೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿಗಳು ಇದ್ದರು