ಚಳ್ಳಕೆರೆ ನ್ಯೂಸ್ : ಕಡ್ಡಾಯ ಕನ್ನಡ ಬಳಕೆ ಹಾಗೂ ಮಳೀಗೆ ಹಾಗೂ ಇತರೆ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಿರಬೇಕು ಎಂದು ಕಲ್ಲಿನ ಕೋಟೆ ಚಿತ್ರದುರ್ಗದಲ್ಲಿ ಕರುನಾಡ ವಿಜಯ ಸೇನೆ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಕರುನಾಡ ವಿಜಯ ಸೇನೆ ರಾಜ್ಯಧ್ಯಾಕ್ಷರ ಸೂಚನೆಯಂತೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ನೇತೃತ್ವದಲ್ಲಿ ಚಿತ್ರದುರ್ಗದ ಪ್ರಮುಖ ಬೀದಿಗಳಲ್ಲಿ ರಸ್ತೆಗಿಳಿದು ಪ್ರತಿಭಟಿಸಿದ ಕಾರ್ಯಕರ್ತರು ಕಡ್ಡಯವಾಗಿ ಕನ್ನಡ ಬಳಸದೆ ಇರುವ ನಾಮಫಲಕಗಳಿಗೆ ಮಸಿ ಬಳಿದು ಪ್ರತಿಭಟಿಸಿದ್ದಾರೆ.
ಇನ್ನೂ ಸುಮಾರು ಕಾರ್ಯಕರ್ತರು ಸಂಗೊಳ್ಳಿರಾಯಣ್ಣ ಪ್ರತಿಮೆ ಹಿಡಿದು ಕನ್ನಡವನ್ನು ಬಳಸಬೇಕು ಇಲ್ಲವಾದರೆ ನಮ್ಮ ರಾಜ್ಯ ಬಿಟ್ಟು ತೊಳಗಿ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು.
ಇದೇ ವೇಳೆ ಪೊಲೀಸರಿಗೂ ಕನ್ನಡ ಅಭಿಮಾನಿ ಕಾರ್ಯಕರ್ತರಿಗೆ ಮಾತಿನ ಚಕಮಕಿ ನಡೆದು ಹಲವರನ್ನು ಬಂಧಿಸಿದ ಪೊಲೀಸರು ತದನಂತರ ಬಿಡುಗಡೆಗೊಳಿಸಿದ್ದಾರೆ.