ಚಳ್ಳಕೆರೆ ನ್ಯೂಸ್ : ಪಕ್ಷದ ಎಲ್ಲಾ ಮುಖಂಡರ ಹಾಗೂ ಕಾರ್ಯಕರ್ತರ ಸಹಕಾರ ಪಡೆದು ಪಕ್ಷದ ಬಲವರ್ಧನೆಗೆ ಶ್ರಮಿಸಲಾಗುವುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು ಪಕ್ಷದ ಹಿರಿಯರು ಸೂಚಿಸುವ ಜವಾಬ್ದಾರಿಯನ್ನು ನಿರ್ವಹಿಸಿ ಪಕ್ಷ ಸೂಚಿಸುವ ಅಭ್ಯರ್ಥಿಯ ಗೆಲುವಿಗೆ ಶ್ರಮ ವಹಿಸಲಾಗುವುದು ನೂತನ ತಾಲೂಕು ಅಧ್ಯಕ್ಷ ಪಿ ತಿಪ್ಪೇಸ್ವಾಮಿ ಹೇಳಿದರು.
ಅವರು ನಗರದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರ ಆಯ್ಕೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಪಕ್ಷದ ಮುಖಂಡರಿಗೂ ಪದಾಧಿಕಾರಿಗಳಿಗೂ, ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿ ಮಾತನಾಡಿದರು,
ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹಾಗೂ ಜಿಲ್ಲಾಧ್ಯಕ್ಷರಾದ ಜಯಣ್ಣನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ, ನನ್ನನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ ಪಕ್ಷದ ತಾಲೂಕು ಘಟಕದ ಎಲ್ಲಾ ಮುಖಂಡರಿಗೆ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು
ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ
ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹಾಗೂ ಜಿಲ್ಲಾಧ್ಯಕ್ಷ
ಜಯಣ್ಣ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಧ್ಯಕ್ಷ ಹೆಗ್ಗೆರೆ ಆನಂದಪ್ಪ, ಕಲಂರಳ್ಳಿ ಶಿವಣ್ಣ, ಹುಲಿಕುಂಟೆ ವೀರೇಂದ್ರಣ್ಣ, ಬೆಳಗೆರೆ ಚಂದ್ರಣ್ಣ, ಕ್ಯಾದಿಗುಂಟೆ ಉದಯಣ್ಣ ,ಗೌರಿಪುರ ರಾಮಣ್ಣ, ಮಾದೆಪುರ ಸುನಿಲ್ ನಗರಸಭಾ ಸದಸ್ಯರಾದ ಶ್ರೀನಿವಾಸ್ ಕುಮಾರ್ ಪ್ರಮೋದ್, ನಾಗಪ್ಪನಹಳ್ಳಿ ಗೇಟ್ ದೇವರಾಜಣ್ಣ ಮುಖಂಡರು ಉಪಸ್ಥಿತರಿದ್ದರು.