ಚಳ್ಳಕೆರೆ ನ್ಯೂಸ್ : ದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ, ಆದ್ದರಿಂದ ರಾಜ್ಯದಲ್ಲಿ ಬಹುಮತ ನೀಡಿದ ಮತದಾರರಿಗೆ ಪಕ್ಷ ನೀಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅದರಲ್ಲಿ ಐದು ಗ್ಯಾರಂಟಿ ಯೋಜನೆಗಳು ಇಂದು ಬಡ ಜನರಿಗೆ ವರದಾನವಾಗಿವೆ ಜಿಲ್ಲಾ ಉಸ್ತುವಾರಿ ಮಂತ್ರಿ ಡಿ.ಸುಧಾಕರ್ ಹೇಳೀದರು.
ಅವರು ನಗರದ ಅಂಭೇಡ್ಕರ್ ನಗರದಲ್ಲಿ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸರ್ವರಿಗೂ ಸೂರು ಯೋಜನೆಯಡಿ ಚಳ್ಳಕೆರೆ ನಗರದ ಅಂಬೇಡ್ಕರ್ ನಗರದಲ್ಲಿ ನಿರ್ಮಾಣವಾದ 700ಮನೆಗಳ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ಅಮೃತ್ತ ಹಸ್ತದಿಂದ ವರ್ಚ್ಯುಲ್ ಮುಖಾಂತರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಡಿ.ಸುಧಾಕರ್ ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ ರಘುಮೂರ್ತಿ ರವರು ಪಾಲ್ಗೊಂಡು ವರ್ಚ್ಯುಯಲ್ ಮೂಲಕ ಮನೆ ಹಂಚಿಕೆ ಹಕ್ಕು ಪತ್ರಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಚಳ್ಳಕೆರೆಯಲ್ಲಿ ಕಳೆದ ಅರವತ್ತು ವರ್ಷಗಳಿಂದ ಕೊಳಚೆಗೆರೆಯಲ್ಲಿ ವಾಸಿಸುವ ಜನರಿಗೆ ಸೂರು ಕಲ್ಪಿಸುವ ಮೂಲಕ ಇಂದು ನಮ್ಮ ಸರಕಾರದಿಂದ ಮನೆ ನಿರ್ಮಾಣ ಮಾಡಿ ಮನೆ ಹಂಚಿಕೆ ಮಾಡಿದೆ ಎಂದರು.
ಇನ್ನೂ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಈಡೀ ನನ್ನ ಕ್ಷೇತ್ರದಲ್ಲಿ ಕೊಳಚೆಗೆರೆ ಮುಖ್ಯವಾಗಿ ಮಾಡಬೇಕು ಎಂಬ ಸಾರ್ವಜನಿಕರ ಮನವಿಗೆ ನನ್ನ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮೊದಲ ಆಧ್ಯತೆಯಾಗಿ ಮಾಡಿದೆ, ಇನ್ನೂ ಮತದಾರರ ಋಣ ನನ್ನ ಮೇಲೆ ಇದೆ, ಮೂರು ಬಾರಿ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ಬಲ ತುಂಬಿದ್ದಾರೆ, ಆದ್ದರಿಂದ ಸರಕಾರ ರಚನೆಯಾದ ಕೇಲವೆ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಇನ್ನೂ ಇದೇ ಸಂಧರ್ಭದಲ್ಲಿ ಚಳ್ಳಕೆರೆ ಮನೆಯ ನಿರ್ಮಿಸಿಕೊಂಡ 700 ಫಲಾನುಭವಿಗಳಲ್ಲಿ ಸಾಂಕೇತಿಕವಾಗಿ ಕೆಲವು ಫಲಾನುಭವಿಗಳಿಗೆ ಮನೆಯ ಹಂಚಿಕೆ ಹಕ್ಕು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ, ಸದಸ್ಯರಾದ ಸುಮಕ್ಕ ಅಂಜಿನಪ್ಪ, ಜೈ ತುಂಬಿ ಮಾಲ್ಲಿಕ್ ಸಾಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ಮುಖಂಡರುಗಳಾದ ಟಿ.ಎ.ಟಿ ಪ್ರಭುದೇವ್, ಮುಜೀಬ್, ನಾಗಲಕ್ಷ್ಮಿ ಮ್ಮ, ಬಡಗಿ ಪಾಪಣ್ಣ, ದಳವಾಯಿ ಮೂರ್ತಿ, ಸಿ.ಟಿ.ಶ್ರೀನಿವಾಸ್, ವೀರಭದ್ರ, ಅನ್ವರ್ ಮಾಸ್ಟರ್, ಲಕ್ಷ್ಮಣ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!