ಕೋಟೆ ನಾಡು ಚಿತ್ರದುರ್ಗದ ನಾಲ್ವರಿಗೆ ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಉಪಾಧ್ಯಕ್ಷರು ಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು,

ಮೊದಲ‌ ಹಂತವಾಗಿ ಕಲ್ಲಿನ‌ ಕೋಟೆ ಚಿತ್ರದುರ್ಗ ಜಿಲ್ಲೆಯ ಇಬ್ಬರು ಶಾಸಕರುಗಳಿಗೆ ನಿಗಮ ಮಂಡಳಿ ದೊರೆತು ಅಧಿಕಾರ ಸ್ವೀಕರಿಸಿದರು.

ಇನ್ನೂ‌ ಮುಂದುವರೆದ ಭಾಗವಾಗಿ

ಕೋಟೆ ನಾಡು ಚಿತ್ರದುರ್ಗದ ನಾಲ್ವರಿಗೆ ಅದೃಷ್ಟ ಖುಲಾಯಿಸಿದೆ.

ಚಿತ್ರದುರ್ಗದ ಮೊಳಕಾಲೂರು ತಾಲೂಕಿನ ಡಾ. ಬಿ.ಯೋಗೇಶ್ ಬಾಬು 2018 ರಲ್ಲಿ ಶ್ರೀರಾಮುಲು ವಿರುದ್ಧ ಮೊಳಕಾಲೂರು
ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಈಗ ಇವರನ್ನು ಕರ್ನಾಟಕ ದ್ರಾಕ್ಷಾ ಸರ ಮಂಡಳಿಯ
ಅಧ್ಯಕ್ಷರನ್ನಾಗಿ ನೇಮಕ ಮಾಡಿ‌ ಆದೇಶ ಹೊರಡಿಸಿದೆ.

ಹಾಗೂ ಹೊಳಲ್ಕೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸವಿತಾ ರಘು,
ಅವರನ್ನು ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷರನ್ನಾಗಿ ಆದೇಶ ಹೊರಡಿಸಿದೆ. ಇನ್ನೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಎಂಕೆ ತಾಜ್ ಪೀರ್
ಅವರನ್ನು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ‌ ಮಾಡಿದೆ.

ಹಾಗೂ ಜಿಎಸ್ ಮಂಜುನಾಥ್ ಅವರನ್ನು ಕಾರ್ಮಿಕ ಕಲ್ಯಾಣ
ಮಂಡಳಿಯ ಉಪಾಧ್ಯಕ್ಷರನ್ನಾಗಿ ಎರಡು ವರ್ಷಗಳ ಕಾಲ ಆಡಳಿತ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.

About The Author

Namma Challakere Local News
error: Content is protected !!