ಪಿಯು ಪರೀಕ್ಷೆಗೆ ಸಕಲ ಸಿದ್ದತೆ ಮಾಡಿಕೊಂಡ ಪ್ರಾಂಶುಪಾಲರು
ಚಳ್ಳಕೆರೆ ನ್ಯೂಸ್ : ಮಾರ್ಚ 1.ರಿಂದ 22ರವೆರೆಗ ನಡೆಯುವ ದ್ವಿತೀಯ ಪಿಯು ವಾರ್ಪಿಕ ಪರೀಕ್ಷೆಗೆ ಈಗಾಗಲೇ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ರವೀಶ್ ಹೇಳಿದರು.
ಅವರು ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲೆಯಲ್ಲೆ ಅತೀ ಹೆಚ್ಚಿನ ವಿದ್ಯಾರ್ಥಿಗಳು ಇರುವ ಪರೀಕ್ಷಾ ಕೇಂದ್ರ ನಮ್ಮ ಕೇಂದ್ರವಾಗಿದೆ ಸುಮಾರು 1545 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇನ್ನೂ ನಗರದಲ್ಲಿ ಮೂರು ಕೇಂದ್ರಗಳಿದ್ದು ಅದರಲ್ಲಿ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜು, ಹೆಗ್ಗೆರೆ ತಾಯಮ್ಮ ಪದವಿ ಪೂರ್ವ ಕಾಲೇಜು, ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ.
ಇನ್ನೂ ಈಗಾಗಲೇ ಪರೀಕ್ಷೆ ಬರೆಯುವ ಮಕ್ಕಳಿಗೆ ಯಾವುದೇ ತೊಂದರೆಯಾಗದAತೆ ಮುಂಜಾಗ್ರತಕ್ರಮ ವಹಿಸಿಲಾಗಿದೆ. ಕುಡಿಯುವ ನೀರು, ಆರೋಗ್ಯ, ಹಾಗೂ ಪೊಲೀಸ್ ಸಹಕಾರದೊಂದಿಗೆ ಪರೀಕ್ಷೆ ಯಶಸ್ವಿಗೆ ಕ್ರಮವಹಿಸಲಾಗಿದೆ.
ಇನ್ನೂ ಮೂರು ಕೇಂದ್ರಗಳಲ್ಲಿ ಪೊಲೀಸ್ ಸರ್ಪಗಾವಲು, ಹಾಗೂ ನಮ್ಮ ಸಿಬ್ಬಂದಿ ಹಾಜರಿರುತ್ತಾರೆ, ಮತ್ತೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗಿದೆ, ಒಟ್ಟಾರೆ ತಾಲೂಕಿನಲ್ಲಿ ಸರಕಾರಿ ಪಿಯು ಕಾಲೇಜು 6, 12 ಅನುದಾನ ಸಹಿತ, 7 ಅನುದಾನ ರಹಿತ ಕಾಲೇಜುಗಳು ಒಟ್ಟಾರೆ 25 ಕಾಲೇಜಿನ ವಿದ್ಯಾರ್ಥಿಗಳು ಸುಮಾರು 2ರಿಂದ ಮೂರು ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎನ್ನಲಾಗಿದೆ.