ಚಳ್ಳಕೆರೆ : ನಗರದ 25 ಸರ್ಕಾರಿ ಬ್ಯಾಂಕುಗಳಿವೇ ಹಾಗೂ 12 ಸಹಕಾರಿ ಸಂಘದ ಬ್ಯಾಂಕುಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ, ಇವೆಲ್ಲ ಬ್ಯಾಂಕುಗಳು R B I ಅಂಡರ್ನಲ್ಲಿ ನಿರಂತರ ಸೇವೆಯನ್ನು ಜನ ಜನಸಾಮಾನ್ಯರಿಗೆ ಕೊಡುತ್ತಿವೆ ಎಂದು ಸಿಪಿಐ ಕುಮಾರ್ ಹೇಳಿದರು,
ಇವರು ನಗರದ ಪೊಲೀಸ್ ಠಾಣೆಯಲ್ಲಿ ಎಲ್ಲಾ ಬ್ಯಾಂಕ್ ಗಳ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ ಜಾಗೃತಿ ಮೂಡಿಸಿ ಮಾತನಾಡಿದ ಇವರು,
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ದರೋಡೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ,
ಈ ಹಿನ್ನಲೆಯಲ್ಲಿ ಬ್ಯಾಂಕಿನಲ್ಲಿ ಕೋಟಿಗಟ್ಟಲೆ ವ್ಯವಹಾರಗಳು ನಡೆಯುತ್ತಿವೆ,
ಆದರೆ ಕೆಲವು ಬ್ಯಾಂಕುಗಳಲ್ಲಿ ಕಾವಲುಗಾರರ ನೇಮಕಾತಿ ಆಗಿಲ್ಲ ,
ಅಲ್ಲದೆ ಸಿಸಿ ಕ್ಯಾಮೆರಾ ಗಳು ಒಳಗಡೆ ಅಳವಡಿಸಿದ್ದೀರಿ, ಆದರೆ ಹೊರಗಡೆ ರಸ್ತೆ ಕಾಣುವಹಾಗೆ ಗುಣಮಟ್ಟದ ಸಿಹಿ ಕ್ಯಾಮೆರಾ ಗಳನ್ನು ಅಳವಡಿಸಿ,
ಇದು ಅಲ್ಲದೆ ಬ್ಯಾಂಕಿನ ಮುಂಭಾಗ ಕಣ್ಣಗಾವಲು ಇಲ್ಲದಿರುವುದರಿಂದ ಬ್ಯಾಂಕಿನಲ್ಲಿ ವ್ಯವಹರಿಸುವ ಗ್ರಾಹಕರಿಗೆ ಕಳ್ಳರ ಭೀತಿ ಇರುವ ಕಾರಣ ಮುಂಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ,
ಅಲ್ಲದೆ ಪ್ರತಿಯೊಂದು ಬ್ಯಾಂಕುಗಳ ಎಟಿಎಂ ಗಳಲ್ಲಿ ಕಣ್ಗಾವಲು ಹಾಗೂ ಕಾವಲುಗಾರರನ್ನು ಕಡ್ಡಾಯವಾಗಿ ನೇಮಿಸಬೇಕು,
ಹಾಗೂ ಒಂದು ಕ್ಯಾಮೆರಾ ಕಣ್ಣು ಸಾವಿರಾರು ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ ,
ಇಂತಹ ವ್ಯವಸ್ಥೆಗಳನ್ನು ಬ್ಯಾಂಕ್ ವ್ಯವಸ್ಥಾಪಕರು ಅನುಸರಿಸಬೇಕು, ಅಲ್ಲದೆ ಬ್ಯಾಂಕುಗಳಲ್ಲಿ ಗ್ರಾಹಕರ ಕಿರಿಕಿರಿ ಹಾಗೂ ಅತಾ ಥೂ ರ್ಯ ನಡೆದಾಗ ಪೊಲೀಸರು ನಿಮಗೆ ನೀಡಿರುವ ಫೋನ್ ಸಂಖ್ಯೆಗೆ ಕಾಲ್ ಮಾಡಿದರೆ ತಕ್ಷಣವೇ ಪೊಲೀಸ್ ಸಿಬ್ಬಂದಿಗಳು ಹಾಜರಾಗಿರುತ್ತಾರೆ.
ಈ ಎಲ್ಲಾ ನಿಯಮಗಳ ಸದ್ಬಳಕೆಯನ್ನು ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರು ಭದ್ರತೆ ದೃಷ್ಟಿಯಿಂದ ಕಾರ್ಯನಿರ್ವಹಿಸಿದರೆ ಸಾರ್ವಜನಿಕರಿಗೆ ಗುಣಮಟ್ಟದ ಸೇವೆಯನ್ನು ಸಲ್ಲಿಸಿದಂತಾಗುತ್ತದೆ ,ಎಂದು ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು,
ಇನ್ನು ಈ ಸಂದರ್ಭದಲ್ಲಿ ಸಿಪಿಐ ಕುಮಾರ್, ಪಿಎಸ್ಐ ಸತೀಶ್ ನಾಯಕ್, ಪಿಎಸ್ಐ ದೇವರಾಜ್, ಪಿ ವಿಶಾಲ್, ಸೇರಿದಂತೆ ಅನೇಕ ಪೊಲೀಸ್ ಸಿಬ್ಬಂದಿಗಳು ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರು ಹಾಜರಿದ್ದರು,