ಚಳ್ಳಕೆರೆ ನ್ಯೂಸ್ : ಉರಿ ಬಿಸಿಲ ಬೆಸಿಗೆ ಒಂದಾಡೆಯಾದರೆ ಕುಡಿಯುವ ನೀರಿಗೆ ಬಯಲು ಸೀಮೆ ಪ್ರದೇಶದಲ್ಲಿ ಸಾರ್ವಜನಿಕರು ಅರಸಾಹಸ ಪಡಬೇಕಾಗಿದೆ.
ಹೌದು ಇಂತಹದೊAದು ಘಟನೆ ಚಳ್ಳಕೆರೆ ತಾಲೂಕಿನ ಪರುಶುರಾಂಪುರದ ಗೊಲ್ಲರಹಟ್ಟಿ ಮುಂಬಾಗದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕಾಣಬಹುದಾಗಿದೆ.
ಇಲ್ಲಿನ ಘಟಕದ ಮಿಷನರಿಗಳು ದುರಸ್ಥಿಗೆ ತಲುಪಿ ಹಲವು ವರ್ಷಗಳೆ ಕಳೆದಿವೆ ಆದರೆ ಸಂಬAದಿಸಿದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿಕುಳಿತಿದ್ದಾರೆ.
ಇನ್ನೂ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕುಡಿಯುವ ನೀರು ನೆಪಮಾತ್ರಕ್ಕೆ ಮಾತ್ರ ಬರುತ್ತೆ, ಆದರೆ ಸುತ್ತಲಿನ ಕೊಳಚೆ ಪ್ರದೇಶ, ಮಲೀನವಾದ ನೀರು ತುಂಬಿಕೊAಡು ಸಾರ್ವಜನಿಕರು ನೀರಿಗಾಗಿ ಅರಸಾಹಸ ಪಡುವಂತಾಗಿದೆ.
ಇನ್ನೂ ಸ್ಥಳೀಯ ಮುಖಂಡ ಪಿಲ್ಲಹಳ್ಳಿ ಚಿತ್ರಲಿಂಗಪ್ಪ ಸಂಬAಧಿಸಿದ ಪಿಡಿಓಗೆ ದೂರವಾಣಿ ಮೂಲಕ ಸಮಸ್ಯೆ ಬಗ್ಗೆ ತಿಳಿಸಿದರೆ ಉಡಾಫೆಯಿಂದ ಉತ್ತರಿಸಿದ್ದಾರೆ ಇದರಿಂದ ಇಂತಹ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಾರ್ವಜನಿಕರು ಎಲ್ಲಿಗೆ ಹೋಗಬೇಕು ಇದರಿಂದ ಮೇಲಾಧಿಕಾರಿಗಳು ಇದರ ಬಗೆ ಗಮನಹರಿಸಬೇಕು ಎಂದು ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾಹಿತಿ ಹಂಚಿಕೊAಡಿದ್ದಾರೆ.

About The Author

Namma Challakere Local News
error: Content is protected !!