ಚಳ್ಳಕೆರೆ ನ್ಯೂಸ್:
ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಸಚಿವ ಡಿ.
ಸುಧಾಕರ್
ರಾಜಮಹಾರಾಜರ ಕಾಲದಿಂದಲೂ ಕುಸ್ತಿ ಪ್ರತಿಷ್ಠಿತ
ಸ್ಪರ್ಧೆಯಾಗಿದ್ದು, ನಮ್ಮ ಸಾಂಸ್ಕೃತಿಕ ವೈಭವಕ್ಕೆ ಹೆಸರಾಗಿದೆ.
ರಾಜರು ಮನರಂಜನೆಗೆ ಈ ಕುಸ್ತಿ ಪಂದ್ಯಾವಳಿಗಳನ್ನು ಆಯೋಜನೆ
ಮಾಡಿ ಕುಸ್ತಿಪಟುಗಳನ್ನು ಬೆಳೆಸಿ ಪ್ರೋತ್ಸಾಹಿಸುತ್ತಿದ್ದರು ಎಂದು
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಹಿರಿಯೂರಿನಲ್ಲಿ ಮದಕರಿ ನಾಯಕ ಯುವಕ ಸಂಘದಿಂದ
ತೇರುಮಲ್ಲೇಶ್ವರಸ್ವಾಮಿ ಜಾತ್ರೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ
ಅಂತರ ಜಿಲ್ಲಾ ಜಂಗೀ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ
ಮಾತಾಡಿದರು.