ಚಳ್ಳಕೆರೆ ನ್ಯೂಸ್ : 2024ರ ಲೋಕಸಭಾ ಚುನಾವಣೆ ಅಂಗವಾಗಿ ಮೊಳಕಾಲ್ಮೂರು ಕ್ಷೇತ್ರದ ಜೆಡಿಎಸ್ ಪಕ್ಷದ ಸಭೆಯನ್ನು ಬಿಜಿಕೆರೆ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.
ಇನ್ನೂ ಲೋಕಸಭಾ ಚುನಾವಣೆಯ ಬಗ್ಗೆ ಮೊಳಕಾಲ್ಮೂರು ಕ್ಷೇತ್ರದ ಜೆಡಿಎಸ್ ಪಕ್ಷದ ಪರಾಜಿತಗೊಂಡ ಅಭ್ಯರ್ಥಿ ಟಿ ವೀರಭದ್ರಪ್ಪನವರ ಸಭೆಗೆ ಸರ್ವರನ್ನೂ ಆಹ್ವಾನಿಸುತ್ತಾ ಮನವಿ ಮಾಡಿದ್ದಾರೆ.
ಈ ಸಭೆಗೆ ಅಧ್ಯಕ್ಷತೆಯನ್ನು ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷರಾದಂತಹ ಜಯಣ್ಣನವರು ಆಗಮಿಸಲಿದ್ದಾರೆ ಹಾಗೂ ಜೆಡಿಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ಆಗಿರುವಂತಹ ತಿಮ್ಮರಾಯಪ್ಪ ಹಿರಿಯೂರು ಕ್ಷೇತ್ರದ ಜೆಡಿಎಸ್ ಪಕ್ಷದ ಪರಾಜಿತಗೊಂಡ ಅಭ್ಯರ್ಥಿ ರವೀಂದ್ರಪ್ಪ, ಹಿರಿಯ ಜೆಡಿಎಸ್ ಪಕ್ಷದ ಮಾಜಿ ಅಧ್ಯಕ್ಷ ಯಶೋಧರ್ ಹಾಗೂ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಕಾಂತರಾಜ, ಚಳ್ಳಕೆರೆ ಕ್ಷೇತ್ರದ ಹಾಲಿ ಜೆಡಿಎಸ್ ಪಕ್ಷದ ಅಧ್ಯಕ್ಷ ತಿಪ್ಪೇಸ್ವಾಮಿ, ಚಿತ್ರದುರ್ಗ ಜಿಲ್ಲೆಯ ಯುವ ಘಟಕ ಅಧ್ಯಕ್ಷ ಪ್ರತಾಪ್ ಜೋಗಿ ಮತ್ತು ಮೊಳಕಾಲ್ಮೂರು ಕ್ಷೇತ್ರದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಿರಂಗಸ್ವಾಮಿ ಕಾಲುವೆಹಳ್ಳಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ತಾಲೂಕು ಪದಾಧಿಕಾರಿಗಳು ತಾಲೂಕ್ ಜೆಡಿಎಸ್ ಪಕ್ಷದ ಮುಖಂಡರುಗಳು ಮತ್ತು ಚಿತ್ರದುರ್ಗ ಜಿಲ್ಲೆಯ ಜೆಡಿಎಸ್ ಪಕ್ಷದ ಜಿಲ್ಲಾ ಮುಖಂಡರುಗಳು ಈ ಸಭೆಗೆ ಭಾಗವಹಿಸಲಿದ್ದಾರೆ ಮತ್ತು ಮೊಳಕಾಲ್ಮೂರು ಕ್ಷೇತ್ರದ ಜೆಡಿಎಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು ಹಾಗೂ ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರುಗಳು ಈ ಸಭೆಯನ್ನು ಯಶಸ್ವಿಯಾಗಿ ಮಾಡಿ ಕೊಡಬೇಕೆಂದು ಮೊಳಕಾಲ್ಮೂರು ಕ್ಷೇತ್ರದ ಜೆಡಿಎಸ್ ಪಕ್ಷದ ಪರಾಜಿತಗೊಂಡ ಅಭ್ಯರ್ಥಿ ಟಿ ವೀರಭದ್ರಪ್ಪನವರ ಸಭೆಗೆ ಸರ್ವರನ್ನೂ ಆಹ್ವಾನಿಸುತ್ತಾ ಮನವಿ ಮಾಡಿದ್ದಾರೆ