ಟ್ರಾಫಿಕ್ ರೂಲ್ಸ್ ಮಾಡದ ಚಾಲಕರೇ ಎಚ್ಚರ..?
ಬೆಳ್ಳಿ ಬಂಗಾರ ವರ್ತಕರಿಗೆ ಸಿಸಿಕ್ಯಾಮರಾ ಅಳವಡಿಸಿಕೊಳ್ಳಲು ಖಾಕಿಪಡೆ ಕಸರತ್ತು..
ಚಳ್ಳಕೆರೆ ನ್ಯೂಸ್ : ಅಧಿಕಾರವಹಿಸಿಕೊಂಡ ಮೂರೇ ದಿನಗಳಲ್ಲಿ ನಗರದ ವಾಸ್ತವತೆ ಬದಲಾಯಿಸಿದ ಪಿಐ ಕೆ.ಕುಮಾರ್ ರವರು ನಗರದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವ ಆಟೋ ರಿಕ್ಷಾ ಚಾಲಕರಿಗೆ ಮೊದಲ ಹಂತವಾಗಿ ಸಭೆ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ನಗರದಲ್ಲಿ ದಿನನಿತ್ಯ ಓಡಾಡುವ ಪ್ರಯಾಣಿಕರಿಗೆ ಕಿರಿಕಿರಿ ನೀಡದೆ , ರಸ್ತೆ ಮೇಲೆ ನಿಲ್ಲಿಸದೆ, ನಿಧನವಾಗಿ ನಿಮ್ಮ ಆಟೋ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರನ್ನು ಕರೆತರುವ ಮೂಲಕ ಸಾರ್ವಜನಿಕರೊಟ್ಟಿಗೆ ಸಹಕರಿಸಬೇಕು.
ಇನ್ನೂ ನಗರದಲ್ಲಿ ಖಾಸಗಿ ಬಸ್ ಗಳು ಹಾಗೂ ಬೈಕ್ ಸವಾರರು ರೂಲ್ಸ್ ಪಾಲಿಸದೆ ಇರುವುದು ಗಮನಕ್ಕೆ ಬಂದಿದೆ.
ಇನ್ನೂ ನಗರದಲ್ಲಿ ನೆಹರು ವೃತ್ತ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತ, ಬಳ್ಳಾರಿ ರಸ್ತೆ, ಬೆಂಗಳೂರು ರಸ್ತೆ, ಪಾವಗಡ ರಸ್ತೆ, ಚಿತ್ರದುರ್ಗ ರಸ್ತೆ ಈಗೇ ಅಷ್ಟ ದಿಕ್ಕುಗಳಲ್ಲಿ ಖಾಕಿಪಡೆ ದಿನದ ಇಪ್ಪತ್ತು ನಾಲ್ಕು ಗಂಟೆ ಸೇವೆ ನೀಡಲಿದೆ.
ಆದ್ದರಿಂದ ವಾಹನ ಸಾವರಾರು ತಮ್ಮ ಹೊಟ್ಟೆ ಪಾಡಿಗಾಗಿ ದುಡಿಯುವ ಆಟೋರಿಕ್ಷಾಗಳು ಸರಿಯಾದ ನಿಯಮಗಳನ್ನು ( ರೂಲ್ಸ್) ಪಾಲಿಸಿ ಇಲ್ಲವಾದರೆ ದಂಡ ಬೀಳುತ್ತೆ…
ಪೊಲೀಸರಿಗೆ ದಂಡ ಹಾಕುವ ಉದ್ದೇಶ ಇಲ್ಲ, ಆದರೆ ನಿಯಮಗಳನ್ನು ಮೀರಿ ಕಾನೂನು ಪಾಲನೆ ಮಾಡದಿದ್ದಾಗ ಅನಿವಾರ್ಯವಾಗಿ ದಂಡ ಹಾಕಬೇಕಾಗುತ್ತದೆ ಇದರಿಂದ ನೀವು ದುಡಿಯುವ ಬಾಡಿಗೆ ಎಲ್ಲಾವನ್ನು ದಂಡದಲ್ಲಿ ಕಳೆದರೆ ಕುಟುಂಬದ ಗತಿಯೇನು ಆದ್ದರಿಂದ ದಂಡ ಕಟ್ಟುವ ಬದಲು ನಿಯಮಗಳನ್ನು ಪಾಲಿಸಿ ಪೊಲೀಸ್ ಇಲಾಖೆ ಯೊಂದಿಗೆ ಕೈಜೋಡಿಸಿ ಸ್ಮಾಟ್ ಸಿಟಿಯಾಗಲು ಸಹಕಾರಿಯಾಗಿ ಎಂದರು.
ಆಟೋದವರು ಟ್ರಾಫಿಕ್ ನಿಯಮವನ್ನು ತಪ್ಪದೆ ಪಾಲಿಸಬೇಕು, ಎಲ್ಲಾ ಆಟೋದವರು ಡಿ ಎಲ್, ಇನ್ಶೂರೆನ್ಸ್ ಪಡೆದುಕೊಂಡು ಆಟವನ್ನು ಚಲಾಯಿಸತಕ್ಕದ್ದು ಜನಸಂದಣಿ ಜಾಗದಲ್ಲಿ ಸಾರ್ವಜನಿಕ ತೊಂದರೆ ಆಗದಂತೆ ಆಟೋ ಚಲಾಯಿಸತಕ್ಕದ್ದು ಎಂದು ತಿಳಿಸಿದರು
ಚಳ್ಳಕೆರೆ ನಗರದಲ್ಲಿ ಸುಮಾರು 12 ಆಟೋ ನಿಲ್ದಾಣಗಳಿಂದ ಚಾಲಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.