ತಹಶಿಲ್ದಾರ್ ಗೆ ಮನವಿ
ಚಳ್ಳಕೆರೆ ನ್ಯೂಸ್ : ನಮ್ಮ ನೀರು ನಮಗೆ ಉಳಿಸಿ ತದನಂತರ ಬೇರೆ ನೀರು ಕೊಡಿ ಎಂದು ತಾಲೂಕು ಕಛೇರಿಗೆ ಬಂದ ರೈತ ಮುಖಂಡರ ಕೂಗು ಸ್ವಲ್ಪ ಜೋರಾಗಿಯೇ ಇತ್ತು.
ಹೌದು ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿ ಸಮೀಪದ ರಾಣಿಕೆರೆಯ ಎರಿಯಲ್ಲಿ ಹಾಗೂ ತೂಬುಗಳಲ್ಲಿ ರಂದ್ರಗಳಾಗಿ ನೀರು ವ್ಯರ್ಥ ವಾಗಿ ಹರಿಯುತ್ತಿವೆ ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಗತಿಯೇನು ಈದೇ ನೀರನ್ನು ನಂಬಿ ಜೀವನ ಮಾಡುವ ಈ ಭಾಗದ ಜನರಿಗೆ ತುಂಬಲಾರದ ನಷ್ಟವಾಗುತ್ತದೆ.
ಎಂದು ತಾಲೂಕು ಕಚೇರಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.
ಇನ್ನೂ ಸಂಬಂಧಿಸಿದಂತ ಇಲಾಖೆ ಅತೀ ತುರ್ತಾಗಿ ವಿನಃ ಕಾರಣ ವ್ಯರ್ಥವಾಗಿ ಹರಿಯುವ ನೀರನ್ನು ತಡೆದು ಹಾಳಾದ ಚಾನಲ್ ತೂಬುಗಳನ್ನು ದುರಸ್ತಿ ಪಡಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾಧ್ಯಮದೊಂದಿಗೆ ಮಾತನಾಡಿ, ಈ ಭಾಗದ ಅತೀ ದೊಡ್ಡದಾದ ರಾಣಿಕೆರೆ ಸಾವಿರಾರು ರೈತರು ನೂರಾರು ಎಕರೆಗೆ ನೀರುಣಿಸುವ ಈ ಕೆರೆ ಸಾರ್ವಕಾಲಿಕವಾಗಿ ರೈತರ ಒಡನಾಡಿಯಾಗಿದೆ. ಇಂತಹ ಕೆರೆಯಲ್ಲಿ ನೀರು ವ್ಯರ್ಥವಾಗಿ ಹರಿಯುವುದು ಸರಿಯಲ್ಲ
ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ನೀರು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ,
ಬಸವರಾಜ್ ಟಿಕೆ, ಭರಮಸಾಗರ ಘಟಕದ ಅಧ್ಯಕ್ಷ ಬೊಮ್ಮಯ್ಯ, ಗ್ರಾಪಂ.ಸದಸ್ಯ ಶಿರಿಗೆ ಪ್ರಭು, ಕುಮಾರ್, ಪ್ರಕಾಶ್, ಬಿಆರ್.ಪಣಿಯೆಂದ್ರಪ್ಪ, ಜಿಕೆ.ರಾಮರೆಡ್ಡಿ, ಮಂಜುನಾಥ್, ಸಿ.ಗುಂಡಪ್ಪ, ಎಸ್ .ವಿರೂಪಾಕ್ಷ, ರಮೇಶ್ ನಾಯ್ಕ್, ಸೋಮ್ಲ ನಾಯ್ಜ್, ರಾಜಣ್ಣ ಇತರರು ಇದ್ದರು.