ಚಳ್ಳಕೆರೆ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವೇಶ್ವರ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸಿ. ನಾಗರಾಜ್ ಮಾತನಾಡಿ ಮೇ. ರಿಂದ 3 ರವರೆಗೆ ನಗರದ ವೀರ ಶೈವ ಕಲ್ಯಾಣ ಮಂಟಪದದಲ್ಲಿ ಶ್ರೀ ಬಸವೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಮೇ.01 ರಂದು ವೀರಶೈವ ಕಲ್ಯಾಣ ಮಂಟಪದ ಬಳಿ ಮಾಜಿ ಶಾಸಕ ಬಸವರಾಜ್ ಮಠ್ ಷಟ್‍ಸ್ಥಳ ಧ್ವಜಾರೋಹಣ, ಬಸವೇಶ್ವರ ವೃತ್ತಕ್ಕೆ ಮಾಲಾರ್ಪಣೆ, ವೀರಶೈವ ಸಮಾಜದ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ಆಯೋಜನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಇನ್ನು ಮೇ.02 ರಂದು ಬಸವೇಶ್ವರ ವೃತ್ತಕ್ಕೆ ಮಾಲಾರ್ಪಣೆ ಮಾಡುವ ಮೂಲಕ ವೀರಶೈವ ಕಲ್ಯಾಣ ಮಂಟಪದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ, ವೀರಶೈವ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಆಯೋಜನೆ ಹಾಗೂ ಇತರೆ ಕಾರ್ಯಕ್ರಮಗಳು ನಡೆಯಲಿವೆ.
ಮೇ.03 ರಂದು ಬೆಳಿಗ್ಗೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ವಾಸಗುರು ವಚನಾನಂದ ಮಹಾಸ್ವಾಮಿಗಳಿಂದ ಯೋಗಾಸನ ಕಾರ್ಯಕ್ರಮ ನಡೆಯಿಲಿದೆ. ಅದೇ ದಿನ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಹಾಗೂ ವೀರಶೈವ ಮಹಿಳೆಯರಿಂದ ತೊಟ್ಟಿಲು ಕಾರ್ಯಕ್ರಮ, ನಂತರ ಧಾರ್ಮಿಕ ಸಭೆ ನಡೆಯಲಿದ್ದು, ಈ ಸಭೆಯದಿವ್ಯ ಸಾನಿಧ್ಯವನ್ನು ವಚನಾನಂದ ಮಹಾಸ್ವಾಮಿಗಳು ವಹಿಸಲಿದ್ದು, ಶಾಸಕ ಟಿ.ರಘುಮೂರ್ತಿ ಉದ್ಘಾಟನೆ ಮಾಡುವರು. ಮುರಾಘಾ ಮಠದ ಆಡಳಿತಾಧಕಾರಿ ಎಸ್.ಕೆ. ಬಸವರಾಜನ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ, ಪ್ರಾಚಾರ್ಯ ಪ್ರೋ.ಶಾಂತಮೂರ್ತಿ ಬಿ.ಕುಲಕರ್ಣಿ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ವೀರಶೈವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಕೆ.ಎಂ. ಜಗದೀಶ್, ಸದಸ್ಯರಾದ ಕೆ.ಪಿ.ಲೋಕೇಶ್, ಪಿ.ಜಗದೀಶ್, ಎನ್.ಎಸ್. ಶಂಕರ್ ಹಾಗೂ ಸಮುದಾಯದ ಮುಖಂಡರಾದ ಪಂಚಾಕ್ಷರಪ್ಪ, ಶಿಕ್ಷಕ ಮಂಜುನಾಥ, ಬಿಎಚಿಟಿ ಕಿರಣ್ ಹಾಗೂ ಮುಂತಾದವರು ಇದ್ದರು.

Namma Challakere Local News
error: Content is protected !!