ಚಿತ್ರದುರ್ಗ: ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟಾçನಿಕ್ಸ್ & ಕಮ್ಯೂನಿಕೇಷನ್ ವಿಭಾಗದ ವತಿಯಿಂದ “ಡಾಟಾ ಅನಲಿಟಿಕ್ಸ್ ಯುಸಿಂಗ್ ಪೈಥಾನ್ೆ” ಕುರಿತಾದ 2 ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಚಾರ್ಯ ಡಾ.ಭರತ್ ಪಿ ಬಿ ಮಾತನಾಡಿ, ಆಧುನಿಕ ತಂತ್ರಜ್ಞಾನವು ವಿವಿಧ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಸರಳವಾಗಿ ಬಗೆಹರಿಸಲು ಸಹಾಯಕಾರಿಯಾಗಿದೆ. ಡಾಟಾ ಅನಲೈಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ವಿದ್ಯಾರ್ಥಿಗಳು ಈ ಕುರಿತಂತೆ ಪ್ರಾಥಮಿಕ ಅರಿವು ಹೊಂದಬೇಕು ಎಂದು ನುಡಿದರು.
ಎಲೆಕ್ಟಾçನಿಕ್ಸ್ & ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ. ಸಿದ್ಧೇಶ್ ಕೆ ಬಿ ಮಾತನಾಡಿ, ಡಾಟಾ ಅನಲೈಸಿಂಗ್ ವಿಧಾನ ಈಗ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಅಭೆಯಾಂತ್ರಿಕ್ಸ್ ಸಾಪ್ಟ್ಲ್ಯಾಬ್ ತಾಂತ್ರಿಕ ತಂಡದ ವ್ಯವಸ್ಥಾಪಕರಾದ ಶ್ರೀ ಮಲ್ಲೇಶ್ ವಿ ಎಸ್ ಮತ್ತು ಸೀನಿಯರ್ ಸಾಪ್ಟ್ವೇರ್ ಇಂಜಿನಿಯರ್ ಶ್ರೀ ಮಹಾಂತೇಶ್ ಬಿ ಶಿರೂರು ಆಗಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಚಾಲಕರುಗಳಾದÀ ಪ್ರೊ.ಸುದರ್ಶನ್ ಎಂ ಕೆ, ಪ್ರೊ.ತನುಜಾ ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!