ಚಳ್ಳಕೆರೆ ನ್ಯೂಸ್ : ಫೆ.15ಕ್ಕೆ ಹೊರ ಗುತ್ತಿಗೆ ಪೌರಕಾರ್ಮಿಕರ ನಡೆ ಮುಖ್ಯಮಂತ್ರಿಗಳ ಮನೆ ಕಡೆ
ಚಳ್ಳಕೆರೆ ಪೌರಕಾರ್ಮಿಕರಿಂದ ಬೆಂಗಳೂರು ಚಲೋ..

ಚಳ್ಳಕೆರೆ ನ್ಯೂಸ್ : ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿಗೆ ಹಾಗೂ ಪೌರಕಾರ್ಮಿಕರ ನೇಮಕಾತಿಗೆ ಆಗ್ರಹಿಸಿ ಇಂದು ಎರಡನೇ ದಿನಕ್ಕೆ ಮುಂದುವರೆದ ಧರಣಿ ಸತ್ಯಾಗ್ರಹ
ಫೆ-15 ರಂದು ಹೊರಗುತ್ತಿಗೆ ನೌಕರರು ಹಾಗೂ ಪೌರಕಾರ್ಮಿಕರ ನಡಿಗೆ ಮುಖ್ಯಮಂತ್ರಿಗಳ ಮನೆ ಕಡೆಗೆ ಎಂಬ ವಿನೂತನ ಪ್ರತಿಭಟನೆ ಮಾಡುವ ಮೂಲಕ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಪೌರಚಾಲಕರು, ನೀರಗಂಟಿಗಳು ಲೋಡರ್ಸ್, ಕ್ಲೀನರ್ಸ್ , ಹೆಲ್ಪರ್, ಯೂಜಿಡಿ ಕಾರ್ಮಿಕರು ಸೇರಿದಂತೆ ಎಲ್ಲಾ ಬಗೆಯ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ಒಳಪಡಿಸುವಂತೆ ಹಾಗೂ ಪೌರಕಾರ್ಮಿಕರ ಬಾಕಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಇಂದು ಫೆ-13 ರಿಂದ 14 ರವರೆಗೆ ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಧರಣಿ ಪ್ರತಿಭಟನೆ ನಡೆಸುವ ಉದ್ದೇಶದಿಂದ ಇಂದು ಚಳ್ಳಕೆರೆ ನಗರಸಭೆ ಕಾರ್ಯಲಾಯದ ಮುಂದೆ ಹೊರ ಗುತ್ತಿಗೆ ಪೌರಕಾರ್ಮಿಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಹೊರಗುತ್ತಿಗೆ ಪೌರ ಕಾರ್ಮಿಕರ
ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ನಮ್ಮ ಹಕ್ಕು ನ್ಯಾಯ ಯುತವಾದ ಬೇಡಿಕೆಯನ್ನು ಕೇಳಲು ಅವಕಾಶ ಮಾಡಿಕೊಡಬೇಕು ವಿನಃ ಕಾರಣನಮಗೆ ನೋಟಿಸ್ ನೀಡಿಬೆದರಿಕೆ ನೀಡಬಾರದು ಇದರಿಂದ ನಮ್ಮ ಕುಟುಂಬಗಳು ಬೀದಿ ಪಾಲಾಗುತ್ತಿವೆ .. ರಾಜ್ಯಾದ್ಯಂತ ಸ್ವಚ್ಛತೆ, ಕುಡಿಯುವ ನೀರು, ಸ್ಥಗಿತಗೊಳಿಸಿ ಹೋರಾಟದಲ್ಲಿ ಪಾಲ್ಗೊಳ್ಳಲಾಗುವುದು. ನಂತರ ಫೆ-15 ರಂದು ನಮ್ಮ ನಡಿಗೆ ಮುಖ್ಯಮಂತ್ರಿಗಳ ಮನೆ ಕಡೆಗೆ ಎಂಬ ಘೋಷಣೆಯೊಂದಿಗೆ ಸಾವಿರಾರು ಕಾರ್ಮಿಕರು ಮುಖ್ಯಮಂತ್ರಿಗಳ ಮನೆಗೆ ಸಾಗಲಿದ್ದೇವೆ ಎಂದರು.
ಇನ್ನೂ ಪೌರಕಾರ್ಮಿಕ ಪೆನ್ನೆಶ್ ಮಾತನಾಡಿ, ಕಾಂಗ್ರೆಸ್ ಸರಕಾರ ನಮ್ಮ ತಾರತಮ್ಯವನ್ನು ಹೋಗಲಾಡಿಸದೆ ಮುಂಬರುವ ಚುನಾವಣೆಯಲ್ಲಿ ನಾವು ಅವರಿಗೆ ಋಣಿಯಾಗಿರುತ್ತೆವೆ, ಈ ವರೆಗೆ ನಗರ ಸ್ಥಳೀಯ ಸಂಸ್ಥೆಗಳ ಹೊಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದ ಸ್ಪಂದನೆ ಇಲ್ಲವಾಗಿದೆ. ಈ ನೌಕರರನ್ನು ನೇರ ಪಾವತಿಗೆ
ಒಳಪಡಿಸುವುದರಿಂದ ಸರ್ಕಾರಕ್ಕೆ ಜಿಎಸ್‌ಟಿ ಉಳಿತಾಯದ ಜೊತೆಗೆ ನೌಕರರಿಗೆ ಸೇವಾಬದ್ರತೆಯು ದೊರಕಲಿದೆ. ಏಜೆನ್ಸಿಗಳ
ಕಿರುಕುಳವು ನಿಲ್ಲಲಿದೆ. ಇದಲ್ಲದೆ ಈ ಎಲ್ಲಾ ನೌಕರರು ಕರ್ನಾಟಕ ಮುನಿಸಿಪಲ್ ಕಾಯ್ದೆ ಪ್ರಕಾರ ಪೌರಕಾರ್ಮಿಕರೆ ಆಗಿದ್ದಾರೆ.

ಆಗ್ರಹಗಳು.

  1. ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರಲು ಬಜೆಟ್‌ನಲ್ಲಿ ಘೋಷಣೆ
    ಮಾಡಬೇಕು.
  2. ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದಪಡಿ ತಂದು ಅಗತ್ಯಕ್ಕನುಗುಣವಾಗಿ
    ಪೌರಚಾಲಕ ಹುದ್ದೆಗಳನ್ನು ಸೃಷ್ಠಿಸಬೇಕು.
  3. ಸಂಕಷ್ಟ ಭತ್ಯೆಯನ್ನು ನೇರಪಾವತಿ ಹಾಗೂ ಗುತ್ತಿಗೆ ಪೌರಕಾರ್ಮಿಕರಿಗೂ ವಿಸ್ತರಿಸಬೇಕು.
  4. ಭಾಕಿ ಇರುವ ಪೌರಕಾರ್ಮಿಕ ಹುದ್ದೆಗಳ ಭರ್ತಿ ಸೇರಿದಂತೆ ನಾಲ್ಕೂ ಬೇಡಿಕೆಗಳನ್ನು ಬಜೆಟ್ಟಿನಲ್ಲಿ ಘೋಷಿಸಬೇಕು.

ಇದೇ ಸಂಧರ್ಭದಲ್ಲಿ ಹೊರಗುತ್ತಿಗೆ ಪೌರಕಾರ್ಮಿಕರಾದ ಮಂಜುನಾಥ್, ಉಪಾಧ್ಯಕ್ಷ ಪೆನ್ನೇಶ್, ಮಹೇಶ್, ಪ್ರಸನ್ನ, ಹನುಮಂತ, ದಿವಕಾರ್, ನಾಗರಾಜ್, ಹರೀಪ್, ಮಂಜುನಾಥ್, ಪ್ರತಾಪ್, ಅಶೋಕ್, ಬೆಳೆಗೆರೆ ಮಂಜು, ಹನುಮಂತ, ಮಂಜುನಾಥ್, ನಿಂಗರಾಜ್, ರಾಜು, ವಿರೇಶ್, ತಿಪ್ಪೆಶ್, ಸೋಮು, ರುದ್ರ,ಮಹಾಲಿಂಗ ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!