ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಯ ಮಕ್ಕಳೇ ಮೇಲುಗೈ.

ಚಳ್ಳಕೆರೆ ನ್ಯೂಸ್ : ತಾಲ್ಲೂಕಿನ ಎಲ್ಲಾ ಪ್ರೌಢಶಾಲಾ ಹಂತದಲ್ಲಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದ ವಿಜ್ಞಾನ ರಸಪ್ರಶ್ನೆ ಪರೀಕ್ಷೆ ಮಾಡುವ ಮೂಲಕ ಇಂದು ತಾಲೂಕಿನ ಪ್ರಥಮ ವಿದ್ಯಾರ್ಥಿಯನ್ನು ಆಯ್ಕೆ ಮಾಡಬಹುದಾಗಿದೆ ಎಂದು ನೋಡಲ್ ಅಧಿಕಾರಿ ಮಾರುತಿ ಭಂಡಾರಿ ಹೇಳಿದರು.
ಅವರು ನಗರದ ಬಿ.ಇ.ಓ.ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು, ತಾಲೂಕಿನ ಸುಮಾರು 8ಮತ್ತು 9ನೇ ತರಗತಿಯ ಪಠ್ಯ ವಿಷಯದ ಪ್ರಶ್ನೆಗಳ ಮೂಲಕ ಸುಮಾರು 64 ಪ್ರೌಢಶಾಲೆಗಳಿಂದ ತಲಾ ಇಬ್ಬರು ವಿದ್ಯಾರ್ಥಿಗಳು 32 ತಂಡಗಳು ಭಾಗವಹಿಸಿದ್ದು ಲಿಖಿತ ಪರೀಕ್ಷೆ ಬರೆಯಲಾಗಿದ್ದು, ಇನ್ನೂ 6 ತಂಡಗಳಾಗಿ ಮಾಡಲಾಗಿದೆ, ಅದರಂತೆ ರಸಪ್ರಶ್ನೆ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಹುಲಿಕುಂಟೆ ನೆಹರು ಗ್ರಾಮಾಂತರ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ನೀತುಶ್ರೀ ಹೆಚ್. ಹಾಗೂ ತನುಶ್ರೀ ಎಸ್., ಇನ್ನೂ ದ್ವೀತಿಯ ಸ್ಥಾನದಲ್ಲಿ ಆದರ್ಶ ವಿದ್ಯಾಲಯದ 9ನೇ ತರಗತಿಯ ಎಸ್.ನಂದನ, 8ನೇ ತರಗತಿಯ ಎನ್.ವರ್ಷ, ತೃತೀಯ ಸ್ಥಾನಕ್ಕೆ ಅಬ್ಬೆನಹಳ್ಳಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ಕೀರ್ತಿ, 8ನೇ ತರಗತಿ ಎಸ್.ನಂದಿನಿ ತೃಪ್ತಿಪಟ್ಟರು.
ಇದೇ ಸಂಧರ್ಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ರಾಜ್‌ಕುಮಾರ್, ವಿಜ್ಷಾನ ಸಂಘದ ಅಧ್ಯಕ್ಷ ಹುಲಿಕುಂಟೆ ಬಸವರಾಜ್, ಸುನಿಲ್ ನಾಯ್ಕ್, ಪ್ರದೀಪ್ ಕುಮಾರ್, ಮಲ್ಲಿಕಾರ್ಜುನ್, ಇತರರು ಮಕ್ಕಳು ಹಾಜರಿದ್ದರು.

About The Author

Namma Challakere Local News
error: Content is protected !!