ಸೆವಂತಿಗೆ ಹೂವಿನ ಗಿಡದ ಮಧ್ಯೆದಲ್ಲಿ ಗಾಂಜ ಬೆಳೆ.
ಖಚಿತ ಮಾಹಿತಿ ಮೇರೆಗೆ ಬಲೆ ಬೀಸಿದ ಚಳ್ಳಕೆರೆ ಪೊಲೀಸರು
ಪೊಲೀಸ್ ರ ಕೈವಶವಾದ ಮಾದಕ ವಸ್ತು ಗಾಂಜ ಸೊಪ್ಪು ವಶ
ಚಳ್ಳಕೆರೆ ಪೊಲೀಸ್ ಠಾಣವ್ಯಾಪ್ತಿಯ ಪೆತ್ತಮರಹಟ್ಟಿ ಗ್ರಾಮದ ಬೋರಯ್ಯ ಎಂಬುವವರ
ಹೊಲದಲ್ಲಿ ಸೆವಂತಿಗೆ ಹೂವಿನ ಮಧ್ಯೆ ಗಾಂಜ ಬೆಳೆಯನ್ನು ಬೆಳೆದ ನಾಗರಾಜ್ ಎಂಬುವವರು ಸಾರ್ವಜನಿಕರಿಗೆ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಗ್ರಾಮದಲ್ಲಿ ಗಾಂಜ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಕೆ.ಪರುಶುರಾಮ್,, ಹಾಗೂ ಉಪಾಧೀಕ್ಷಕರಾದ ಕುಮಾರಸ್ವಾಮಿ, ಚಳ್ಳಕೆರೆ ಉಪವಿಭಾಗ, ಠಾಣೆಯ ಇನ್ಸ್ಪೆಕ್ಟರ್ ಜೆ.ತಿಪ್ಪೇಸ್ವಾಮಿ, ಮಾರ್ಗದರ್ಶನದಲ್ಲಿ ಪಿಎಸ್ಐ ಕೆ.ಸತೀಶ್ ನಾಯ್ಕ್ ನೇತೃತ್ವದ ತಂಡ ಬಲೆ ಬಿಸಿ ಸುಮಾರು 3.ಕೆಜಿ 700 ಗ್ರಾಂ.ತೂಕದ ಗಾಂಜ ಸೊಪ್ಪನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.