ಚಿತ್ರದುರ್ಗ: ಧಾರವಾಡಕ್ಕೆ ವರ್ಗವಾಗಿರುವ ಜಿಲ್ಲಾಧಿಕಾರಿ ಜಿ.ಆರ್.ಜಿ.ದಿವ್ಯಪ್ರಭು ಅವರಿಗೆ ಬೀಳ್ಕೊಡುಗೆ
ಹಾಗೂ ಚಿತ್ರದುರ್ಗ  ಜಿಲ್ಲಾಧಿಕಾರಿ ಜಿ.ವೆಂಕಟೇಶ ಅವರಿಗೆ  ಸ್ವಾಗತ ಸಮಾರಂಭವನ್ನು ಚಿತ್ರದುರ್ಗ ನಾಗರೀಕ ವೇದಿಕೆ ವತಿಯಿಂದ ನಗರದಲ್ಲಿ ಫೆ.9ರಂದು ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಸಂಜೆ 5 ಗಂಟೆಗೆ ತರಾಸು ರಂಗಮಂದಿರದಲ್ಲಿ ಸಮಾರಂಭವನ್ನು ಆಯೋಜಿಸಿದ್ದು, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ‌ ಮೀನಾ, ಜಿಲ್ಲಾ ಪಂಚಾಯತ್ ಸಿಇಒ ಸೋಮಶೇಖರ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಯುಕ್ತೆ ವಿ.ವಿ.ಜೋತ್ಸ್ನಾ, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ ಪಾಲ್ಗೊಳ್ಳಲಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ ಡಾ.ಎಚ್.ಎ.ಷಣ್ಮುಖಪ್ಪ, ಹಿರಿಯ ವಕೀಲ ಫಾತ್ಯರಾಜನ್, ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಉಪಸ್ಥಿತಿ ಇರಲಿದ್ದು
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮ ಸಂಘಟಕರಾದ ಆರ್.ನರಸಿಂಹರಾಜು, ಡಾ.ಕೆ.ಸೌಮ್ಯಾ ಮಂಜುನಾಥ್ ಕೋರಿದ್ದಾರೆ.

About The Author

Namma Challakere Local News
error: Content is protected !!